ಬೆಂಗಳೂರು: ಜ.30 ರಂದು ಮಾನವ ಸರಪಳಿ
ಬೆಂಗಳೂರು, ಜ.29: ಸೌಹಾರ್ದತೆಗಾಗಿ ಕರ್ನಾಟಕ ವತಿಯಿಂದ ಜ.30 ರಂದು ರಾಜ್ಯ ಕೋಮುವಾದಿ ಶಕ್ತಿಗಳ ವಿರುದ್ಧ ‘ಮಾನವ ಸರಪಳಿ’ ಕಾರ್ಯಕ್ರಮ ನಡೆಸಲಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ಸಾಹಿತಿಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಪ್ರಗತಿಪರ ಮಠಾಧೀಶರು, ವಿದ್ಯಾರ್ಥಿಗಳು, ಮಹಿಳೆಯರು ಕಾರ್ಮಿಕರು ಸೇರಿದಂತೆ ಎಲ್ಲಾ ವಿಭಾಗದ ಜನಸಮುದಾಯದ ಜನರು ಪಾಲ್ಗೊಳ್ಳಲಿದ್ದಾರೆ.
ಯಶವಂತಪುರದ ಟಾಟಾ ಇನ್ಸಿಟಿಟ್ಯೂಟ್‌ನಿಂದ ಆರಂಭಗೊಂಡು, ಕಾಡು ಮಲ್ಲೆಶ್ವರ, ಮಲ್ಲೇಶ್ವರಂ ಮಾರ್ಕೆಟ್, ಕುವೆಂಪು ಪ್ರತಿಮೆ, ಮಂತ್ರಿಮಾಲ್, ನೆಹರು ಸರ್ಕಲ್, ಚಾಲುಕ್ಯ ಸರ್ಕಲ್, ಮಹಾರಾಣಿ ಕಾಲೇಜು, ಪುರಭವನ ದಾಟಿ ಮೃಸೂರು ರಸ್ತೆ, ಬಿಡದಿ, ರಾಮನಗರ ಮೂಲಕ ಚಾಮರಾಜ ನಗರದವರೆಗೂ ಮಾನವ ಸರಪಳಿ ನಿರ್ಮಾಣವಾಗಲಿದೆ ಎಂದು ಸೌಹಾರ್ದ ಕರ್ನಾಟಕ ಸಂಘ ಪ್ರಕಟನೆ ತಿಳಿಸಿದೆ.
Next Story





