'ಕೋಸ್ಟಲ್ ಸೈಕಲಾಥಾನ್ 2018' ಜಿಲ್ಲಾ ಮಟ್ಟದ ಸೈಕಲ್ ರೇಸ್

ಮಂಗಳೂರು,ಜ.29:ಎಸ್.ಆರ್.ಎಸ್. ಗ್ಲೋಬಲ್ ಇಂಡಸ್ಟ್ರೀಸ್ ಸೊಲ್ಯುಶನ್ಸ್,ವಿ.ಆರ್.ಸೈಕ್ಲಿಂಗ್ ಕ್ಲಬ್ ಹಾಗೂ ತಾಜ್ ಸೈಕಲ್ ಕಂಪನಿ ವತಿಯಿಂದ ಟ್ರಿಂಕ್ಸ್ ಅರ್ಪಿಸುವ 'ಕೋಸ್ಟಲ್ ಸೈಕಲಾಥಾನ್ 2018' ಶಾಲಾ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಸೈಕಲ್ ರೇಸನ್ನು ಜ.28 ರಂದು ಇರಾ ಹಿಲ್ಸ್ ಮುಡಿಪುವಿನಲ್ಲಿ ಆಯೋಜಿಸಲಾಗಿತ್ತು.
ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಸೈಕಲ್ ರೇಸಿನ ಬಗ್ಗೆ ಅರಿವು ಮೂಡಿಸಲು ಈ ಸೈಕಲ್ ರೇಸನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸೈಕಲ್ ರೇಸನ್ನು ಟ್ರಿಂಕ್ಸ್ ಮಾರುಕಟ್ಟೆಯ ಮುಖ್ಯ ಅಧಿಕಾರಿಗಳಾದ ಸಂದೀಪ್ ,ಸುಧಾಕರ್ ಕುದ್ರೋಳಿ, ಸರೋಜ ಆಸ್ಪತ್ರೆಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ತಾಜ್ ಸೈಕಲ್ ಕಂಪೆನಿಯ ಮುಖ್ಯಸ್ಥರಾದ ಮುತಾಲಿಬ್ ಎಸ್.ಎಂ ಉದ್ಘಾಟಿಸಿದರು.
ಸೈಕಲ್ ರೇಸಿನಲ್ಲಿ ಮಂಗಳೂರು ನಗರದ 10 ವಿವಿಧ ಶಾಲೆಗಳ 50 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ರೇಸಿನಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಾಗಿತ್ತು.11-13 (3.6ಕಿ.ಮಿ) ಮತ್ತು 14-16(6.3ಕಿ.ಮಿ) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಆಯೋಜಿಸಲಾಗಿತ್ತು.
ಕೋಸ್ಟಲ್ ಸೈಕಲಾಥಾನ್ 2018ರ ವಿಜೇತರು:
11-13 (3.6 ಕಿ.ಮಿ) ವಿದ್ಯಾರ್ಥಿ ವಿಬಾಗದಲ್ಲಿ ಮೊದಲನೇ ಬಹುಮಾನ - ಸೈಫ್ ಶೇಕ್ , ದ್ವಿತೀಯ ಬಹುಮಾನ - ಮಯಾನ್ ಸಿಕ್ವೇರಾ, ತೃತೀಯ ಬಹುಮಾನ- ಮುಹಮ್ಮದ್ ನದೀಮ್ ಪಡೆದರು.
11-13 (3.6 ಕಿ.ಮಿ) ವಿದ್ಯಾರ್ಥಿನಿಯರ ವಿಬಾಗದಲ್ಲಿ ಆ್ಯಶೆಲ್ ಡಿಸಿಲ್ವ ಮೊದಲನೇ ಬಹುಮಾನ ಪಡೆದರು.
14-16(6.3ಕಿ.ಮಿ) ವಿದ್ಯಾರ್ಥಿ ವಿಬಾಗದಲ್ಲಿ ಮೊದಲನೇ ಬಹುಮಾನ - ಶಾಹಿಮ್ ಮುಹಮ್ಮದ್, ದ್ವಿತೀಯ ಬಹುಮಾನ - ಬ್ಲಾನ್ನನ್ ಡಿಯೋನ್,ತೃತೀಯ ಬಹುಮಾನ - ದುರ್ಗೇಶ್ ಎನ್.ಜಿ ಪಡೆದರು.
ಕೋಸ್ಟಲ್ ಸೈಕಲ್ ರೇಸಿನಲ್ಲಿ ಬಾಗವಹಿಸಿದ ಎಲ್ಲಾ ಮಕ್ಕಳಿಗೆ ಮೆಡಲ್ ಹಾಗೂ ಸರ್ಟಿಫೀಕೇಟ್ ಅನ್ನು ವಿತರಿಸಲಾಯಿತು.
ವಿಜೇತರಿಗೆ ನಗದು ಬಹುಮಾನವನ್ನು ವಿ.ಆರ್.ಸೈಕಲಿಂಗ್ ಕ್ಲಬ್ ಮುಖ್ಯಸ್ಥರಾದ ಸರ್ವಶ್ ಹಾಗು ಆರ್.ರಾಜೇಶ್ ಎಸ್.ಆರ್.ಎಸ್.ಗ್ಲೋಬಲ್ ಮುಖ್ಯಸ್ಥರು ಮತ್ತು ಕಂಪೆನಿಯ ಮುಬಿನ್,ನಿತಿನ್ ಮೋಹನ್ನ,ಅಶ್ವತ್, ಶ್ಯಾಮ್ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







