ಮಂಗಗಳ ಮೇಲೆ ಹೊಗೆ!
ಮತ್ತೆ ವಿವಾದದಲ್ಲಿ ಫೋಕ್ಸ್‌ವ್ಯಾಗನ್

ಫ್ರಾಂಕ್‌ಫರ್ಟ್ (ಜರ್ಮನಿ), ಜ. 29: ಕಾರುಗಳ ಮಾಲಿನ್ಯವನ್ನು ಪರೀಕ್ಷಿಸುವುದಕ್ಕಾಗಿ ಕಾರುಗಳು ಬಿಡುವ ಹೊಗೆಯನ್ನು ಮಂಗಗಳು ಮತ್ತು ಮಾನವರು ಉಸಿರಾಡುವಂತೆ ಮಾಡುವ ಪ್ರಯೋಗಗಳಿಗೆ ಫೋಕ್ಸ್‌ವ್ಯಾಗನ್ ಹಣ ನೀಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅದು ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದೆ.
ಫೋಕ್ಸ್‌ವ್ಯಾಗನ್‌ನ ಪರವಾಗಿ ಅಮೆರಿಕದ ಸಂಸ್ಥೆಯೊಂದು 2014ರಲ್ಲಿ ಈ ಪರೀಕ್ಷೆಗಳನ್ನು 10 ಮಂಗಗಳ ಮೇಲೆ ನಡೆಸಿದೆ ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇದರ ಬೆನ್ನಿಗೇ, ಫೋಕ್ಸ್‌ವ್ಯಾಗನ್ ಯಾವುದೇ ರೀತಿಯಲ್ಲಿ ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡಿಲ್ಲ ಎಂಬುದಾಗಿ ಅದು ಶನಿವಾರ ಹೇಳಿಕೆಯೊಂದನ್ನು ನೀಡಿತ್ತು.
ಆದಾಗ್ಯೂ, ನೈಟ್ರೋಜನ್ ಆಕ್ಸೈಡ್‌ನ್ನು ಉಸಿರಾಡುವುದರ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುವ ಪರೀಕ್ಷೆಯನ್ನು 25 ಆರೋಗ್ಯವಂತ ಮನುಷ್ಯರ ಮೇಲೆ ನಡೆಸಲಾಗಿದೆ ಎಂದು ಜರ್ಮನಿಯ ಪತ್ರಿಕೆಯೊಂದು ಸೋಮವಾರ ವರದಿ ಮಾಡಿದೆ.
Next Story





