ತುಂಬೆ ಆಸ್ಪತ್ರೆ ಹೈದರಾಬಾದ್ ಗೆ ಪ್ರತಿಷ್ಟಿತ ಎನ್‌ಎಬಿಎಚ್, ಎನ್‌ಎಬಿಎಲ್ ಮಾನ್ಯತೆ

ಹೈದರಾಬಾದ್, ಜ.30: ತುಂಬೆ ಸಮೂಹ ಸಂಸ್ಥೆಯ ಅಂಗವಾಗಿರುವ ತುಂಬೆ ಆಸ್ಪತ್ರೆ-ಹೈದರಾಬಾದ್‌ಗೆ ಅತ್ಯುತ್ತಮ ಆರೋಗ್ಯ ಸೇವೆಗಾಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಎಚ್) ನಿಂದ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ತುಂಬೆ ಪ್ರಯೋಗಾಲಯಗಳ ಜಾಲದ ಭಾಗವಾಗಿರುವ ತುಂಬೆ ಆಸ್ಪತ್ರೆಯ ಪ್ರಯೋಗಾಲಯವು ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಎಲ್) ನಿಂದ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಎನ್‌ಎಬಿಎಚ್ ಮತ್ತು ಎನ್‌ಎಬಿಎಲ್ ಭಾರತೀಯ ಗುಣಮಟ್ಟ ಮಂಡಳಿಯ (ಕ್ಯೂಸಿಐ) ಯ ವಿಭಾಗೀಯ ಮಂಡಳಿಗಳಾಗಿವೆ. ಎನ್‌ಎಬಿಎಚ್, ಆರೋಗ್ಯ ಸೇವೆಯಲ್ಲಿ ಗುಣಮಟ್ಟದ ಅಂತಾರಾಷ್ಟ್ರೀಯ ಸಂಘದ (ಐಎಸ್‌ಕ್ಯೂಯುಎ)ಯ ಸಾಂಸ್ಥಿಕ ಸದಸ್ಯನಾಗಿದೆ. ಈ ಸಂಘವು ಆರೋಗ್ಯ ಸೇವೆ ಕ್ಷೇತ್ರದಲ್ಲಿ ಮಾನ್ಯತೆಗಳನ್ನು ನೀಡಲು ಮಾನ್ಯತಾ ಸಂಸ್ಥೆಗಳಿಗೆ ಅನುಮತಿಯನ್ನು ನೀಡುವ ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ಸಂಸ್ಥೆಯಾಗಿದೆ. ಅಂತಾರಾಷ್ಟ್ರೀಯ ಲ್ಯಾಬೊರೆಟರಿ ಮಾನ್ಯತೆ ಸಹಕಾರ (ಐಎಲ್‌ಎಸಿ) ಮತ್ತು ಏಷ್ಯಾ ಪಿಸಿಫಿಕ್ ಲ್ಯಾಬೊರೆಟರಿ ಮಾನ್ಯತೆ ಸಹಕಾರ (ಎಪಿಎಲ್‌ಎಸಿ) ಯ ಜೊತೆ ಒಪ್ಪಂದ ಮಾಡಿಕೊಂಡಿರುವ ಕಾರಣ ಎನ್‌ಎಬಿಎಲ್‌ನಿಂದ ಮಾನ್ಯತೆ ಪಡೆದ ಲ್ಯಾಬೊರೆಟರಿಗಳು ಅಂತಾರಾಷ್ಟ್ರೀಯವಾಗಿ ಪ್ರಾಮುಖ್ಯತೆಯನ್ನು ಹೊಂದಿವೆ.
ಈ ಕುರಿತು ಆಸ್ಪತ್ರೆಗೆ ಅಭಿನಂದನೆಯನ್ನು ಸಲ್ಲಿಸಿದ ತುಂಬೆ ಸಮೂಹದ ಸ್ಥಾಪಕಾಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್ ಅವರು, ಆಸ್ಪತ್ರೆಯ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದೆ. ಯುಎಇ ಮತ್ತು ಭಾರತದಲ್ಲಿರುವ ತುಂಬೆ ಆಸ್ಪತ್ರೆಗಳು ಪಡೆದಿರುವ ಅಂತಾರಾಷ್ಟ್ರೀಯ ಮಾನ್ಯತೆಗಳು ಮತ್ತು ಮಾಡಿಕೊಂಡಿರುವ ಒಪ್ಪಂದಗಳು ನಾವು ಅನುಸರಿಸುವ ಅತ್ಯುನ್ನತ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ನಮ್ಮ ಆಸ್ಪತ್ರೆಗಳ ಭೋದನಾ/ಶೈಕ್ಷಣಿಕ ರಚನೆಯು ವಿಶಿಷ್ಟವಾಗಿದೆ ಮತ್ತು ಇದರಿಂದ ಇನ್ನಷ್ಟು ಹೆಚ್ಚಿನ ಗುಣಮಟ್ಟದ ಸವಾಲನ್ನು ಸಾಧಿಸಲು ನಮಗೆ ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಹೈದರಾಬಾದ್ ಆಸ್ಪತ್ರೆಗೆ ಎನ್‌ಎಬಿಎಚ್ ಮತ್ತು ಎನ್‌ಎಬಿಎಲ್ ಮಾನ್ಯತೆ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ. ನಮ್ಮಲ್ಲಿ ಬರುವ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ನೀಡುವುದೇ ನಮ್ಮ ಉದ್ದೇಶವಾಗಿದೆ. ಇಂಥ ಮಾನ್ಯತೆಗಳು ಮತ್ತು ಪ್ರಶಂಸೆಗಳು ನಮ್ಮನ್ನು ಮತ್ತಷ್ಟು ಹೆಚ್ಚಿನ ಸಾಧನೆಯನ್ನು ಮಾಡಲು ಹುರಿದುಂಬಿಸುವ ಮೂಲಕ ರೋಗಿಗಳಿಗೆ ಅತ್ಯಾಧುನಿಕ ಉಪಕರಣಗಳೊಂದಿಗೆ ಉತ್ತಮ ಸೇವೆಯನ್ನು ನೀಡಲು ಸಹಕಾರಿಯಾಗಿದೆ ಎಂದು ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತಿಳಿಸಿದ್ದಾರೆ.