11 ದೇಶಗಳ ವಲಸಿಗರ ಮೇಲಿನ ನಿರ್ಬಂಧ ತೆರವುಗೊಳಿಸಿದ ಅಮೆರಿಕ

ವಾಶಿಂಗ್ಟನ್, ಜ. 30: 11 ‘ಅತಿ ಅಪಾಯಕಾರಿ’ ದೇಶಗಳ ವಲಸಿಗರ ಅಮೆರಿಕ ಪ್ರವೇಶದ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸುವುದಾಗಿ ಅಮೆರಿಕ ಸೋಮವಾರ ಘೋಷಿಸಿದೆ. ಆದರೆ, ಅಮೆರಿಕಕ್ಕೆ ಬರಲು ಇಚ್ಛಿಸುವ ಆ ದೇಶಗಳ ಜನರು ಹಿಂದಿಗಿಂತ ಹೆಚ್ಚಿನ ಕಠಿಣ ತಪಾಸಣೆಯನ್ನು ಎದುರಿಸಬೇಕಾಗುತ್ತದೆ ಎಂದಿದೆ.
ವೀಸಾಕ್ಕೆ ಅರ್ಜಿ ಹಾಕುವ 11 ದೇಶಗಳ ನಾಗರಿಕರು ಕಠಿಣ ಪರೀಕ್ಷೆಗಳಿಗೆ ಒಳಪಡುತ್ತಾರೆ. ಈ ದೇಶಗಳು ಯಾವುದು ಎನ್ನುವುದನ್ನು ಅದು ಪ್ರಕಟಿಸಿಲ್ಲವಾದರೂ, ಈ ಪೈಕಿ 10 ಮುಸ್ಲಿಮ್ ದೇಶಗಳು ಮತ್ತು ಉತ್ತರ ಕೊರಿಯ ಸೇರಿವೆ ಎನ್ನಲಾಗಿದೆ.
ನಿರ್ಬಂಧಿತ ದೇಶಗಳ ಪಟ್ಟಿಯಲ್ಲಿ ಈಜಿಪ್ಟ್, ಇರಾನ್, ಇರಾಕ್, ಲಿಬಿಯ, ಮಾಲಿ, ಉತ್ತರ ಕೊರಿಯ, ಸೊಮಾಲಿಯ, ದಕ್ಷಿಣ ಸುಡಾನ್, ಸುಡಾನ್, ಸಿರಿಯ ಮತ್ತು ಯಮನ್ ಸೇರಿವೆ ಎಂದು ವಲಸಿಗ ಗುಂಪುಗಳು ಹೇಳುತ್ತವೆ.
Next Story





