ಕೊಣಾಜೆ: ಗ್ರಾ.ಪಂ ಅಧ್ಯಕ್ಷರಿಗೆ ಹಲ್ಲೆ, ದೂರು
ಕೊಣಾಜೆ, ಜ. 30: ರಸ್ತೆ ವಿವಾದವೊಂದಕ್ಕೆ ಸಂಬಂಧಿಸಿದಂತೆ ಇತ್ಯರ್ಥಕ್ಕೆ ತೆರಳಿದ್ದ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರ ಮೇಲೆ ಸ್ಥಳೀಯರಿಬ್ಬರು ಹಲ್ಲೆ ನಡೆಸಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುಳಿಂಚಾಡಿ ಎರಡನೇ ಕ್ರಾಸ್ ನಿವಾಸಿ ವಾಲ್ಟರ್ ಮತ್ತು ಸ್ಲಾವಿನ್ ಎಂಬವರ ವಿರುದ್ಧ ಅಧ್ಯಕ್ಷರಿಗೆ ಹಲ್ಲೆ ನಡೆಸಿರುವ ಕುರಿತು ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಸ್ಲಾವಿನ್ ಎಂಬವರ ತಾಯಿ ಸೆವರೀನ್ ಎಂಬವರು ಕೊಣಾಜೆ ಗ್ರಾ.ಪಂ ಅಧ್ಯಕ್ಷ ಶೌಕತ್ ಆಲಿ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತಂಡಗಳ ದೂರು ಪ್ರತಿದೂರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಪುಳಿಂಚಾಡಿಯ ರಸ್ತೆ ಸಂಬಂಧಿಸಿದಂತೆ ವಿವಾದ ಇತ್ತೆನ್ನಲಾಗಿದ್ದು ಇದರ ಇತ್ಯರ್ಥಕ್ಕಾಗಿ ಶೌಕತ್ ಆಲಿ ಅವರು ಸ್ಥಳಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
Next Story





