ಕೊಳ್ಳೇಗಾಲ: ನೂತನ ಉಪನಿರೀಕ್ಷಕರಾಗಿ ವೀಣಾನಾಯಕ್ ಅಧಿಕಾರ ಸ್ವೀಕಾರ

ಕೊಳ್ಳೇಗಾಲ,ಜ.30: ಪಟ್ಟಣ ಪೊಲೀಸ್ ಠಾಣೆಗೆ ನೂತನ ಉಪನಿರೀಕ್ಷಕ ವೀಣಾನಾಯಕ್ ಅವರು ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದರು.
ನೂತನ ಪಿಎಸ್‍ಐಗೆ ವೀಣಾನಾಯಕ್ ಅವರಿಗೆ ವರ್ಗಾವಣೆಯಾದ ಪಿಎಸ್‍ಐ ಮಾಥ್ಯೂನಾಯಕ್ ಅವರು ಪುಷ್ಪಗೂಚ್ಚ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಈ ಹಿಂದೆ ಇದ್ದ ಪಿಎಸ್‍ಐ ಎಂ.ನಾಯಕ್ ಅವರು ಮೈಸೂರು ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಹುಬ್ಬಳಿ ದಾರವಾಡ ಜಿಲ್ಲೆಯಲ್ಲಿ ಅಂತಾರಿಕ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೀಣಾನಾಯಕ್ ಅವರು ಸರ್ಕಾರದ ಆದೇಶದ ಅಡಿಯಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ನೂತನ ಪಿಎಸ್‍ಐಯಾಗಿ ಇಂದು ಅಧಿಕಾರ ಸ್ವೀಕಾರ ಮಾಡಿದರು.
Next Story





