1,045 ರನ್ ದಾಖಲಿಸಿದ ಮುಂಬೈ ಬಾಲಕ ತನಿಷ್ಕ್ ಗಾವಟೆ

ಮುಂಬೈ, ಜ.30: ನವಿ ಮುಂಬೈನ ಶಾಲಾ ಬಾಲಕ ತನಿಷ್ಕ್ ಗಾವಟೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಆಶ್ರಯದಲ್ಲಿ ನಡೆದ ಅಂಡರ್ -14 ನವಿ ಮುಂಬೈ ಶಿಲ್ಡ್ ಆಹ್ವಾನಿತ ಕ್ರಿಕೆಟ್ ಟೂರ್ನಮೆಂಟ್‌ನ ಪಂದ್ಯದಲ್ಲಿ ಮಂಗಳವಾರ ಔಟಾಗದೆ 1,045 ರನ್ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ.
ಶಾಲಾ ಕ್ರಿಕೆಟ್‌ನಲ್ಲಿ ಇದೊಂದು ವಿಶ್ವದಾಖಲೆಯಾಗಿದೆ.
ಕೋಪರ್‌ಖೈರ್ನೆಯ ಯಶವಂತ್‌ರಾವ್ ಚವಾಣ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಯಶವಂತ್‌ರಾವ್ ಚವಾಣ್ ಇಲೆವನ್ ತಂಡದ ಪರ ಆಡಿದ ಗಾವಟೆ ಬ್ಯಾಟಿಂಗ್ ನಡೆಸಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ತನಿಷ್ಕ್ ಗಾವಟೆ ಯಶವಂತ್ ರಾವ್ ಚವಾಣ್ ಆಂಗ್ಲ ಮಾಧ್ಯಮ ಶಾಲಾ ತಂಡದ ವಿರುದ್ಧದ ಪಂದ್ಯದಲ್ಲಿ 515 ಎಸೆತಗಳನ್ನು ಎದುರಿಸಿ 149 ಬೌಂಡರಿ ಮತ್ತು 67 ಸಿಕ್ಸರ್ ೆರವಿನಲ್ಲಿ 1,045 ರನ್ ದಾಖಲಿಸಿದನು.
ಈ ಮೊದಲು ಭಂಡಾರಿ ಕಪ್ ಇಂಟರ್-ಸ್ಕೂಲ್ ಟೂರ್ನಮೆಂಟ್‌ನಲ್ಲಿ ಪ್ರಣವ್ ಧನವಾಡೆ ಗಳಿಸಿದ್ದ 1,009 ರನ್ ದಾಖಲೆಯನ್ನು 13ರ ಹರೆಯದ ತನಿಷ್ಕ್ ಗಾವಟೆ ಹಿಂದಿಕ್ಕಿದ್ದಾನೆ. ಧನವಾಡ್ 1899ರಲ್ಲಿ ಅರ್ಥರ್ ಕಾಲಿನ್ಸ್ ದಾಖಲಿಸಿದ್ದ 628 ರನ್‌ಗಳ ದಾಖಲೆಯನ್ನು ಎರಡು ವರ್ಷಗಳ ಹಿಂದೆ ಮುರಿದು ಹೊಸ ದಾಖಲೆ ನಿರ್ಮಿಸಿದ್ದನು.







