ಸಿರಿಯ ನಿರಾಶ್ರಿತರಿಗೆ ಸೌದಿ ಅರೇಬಿಯದಿಂದ ಮನೆ ನಿರ್ಮಾಣ
ಜಿದ್ದಾ (ಸೌದಿ ಅರೇಬಿಯ), ಜ. 30: ಲೆಬನಾನ್‌ನಲ್ಲಿರುವ ಸಿರಿಯ ನಿರಾಶ್ರಿತರಿಗೆ ಸಹಾಯ ಮಾಡಲು ಸೌದಿ ಅಭಿವೃದ್ಧಿ ನಿಧಿ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಒಪ್ಪಂದವೊಂದಕ್ಕೆ ಸಹಿ ಹಾಕಿವೆ ಎಂದು ಸೌದಿ ಪ್ರೆಸ್ ಏಜನ್ಸಿ ಸೋಮವಾರ ವರದಿ ಮಾಡಿದೆ.
ನಿರಾಶ್ರಿತರಿಗಾಗಿ ರೂಪಿಸಲಾಗಿರುವ ಪುನರ್ವಸತಿ ಯೋಜನೆಯ ಎರಡನೆ ಹಂತವನ್ನು ಜಾರಿಗೊಳಿಸಲು ಸೌದಿ ನಿಧಿಯು 3.5 ಮಿಲಿಯ ಡಾಲರ್ (ಸುಮಾರು 22.22 ಕೋಟಿ ರೂಪಾಯಿ) ದೇಣಿಗೆ ನೀಡಲಿದೆ.
Next Story





