ಚಾರ್ಮಾಡಿ ಘಾಟ್‍ನಲ್ಲಿ ಕಾಡ್ಗಿಚ್ಚು: ಅರಣ್ಯ ಬೆಂಕಿಗಾಹುತಿ

ಬಣಕಲ್, ಜ.31: ಚಾರ್ಮಾಡಿ ಘಾಟ್‍ನ ಏಕಲವ್ಯ ಶಾಲೆಯ ಸಮೀಪದ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಹತ್ತಾರು ಎಕರೆ ಅರಣ್ಯ ಪ್ರದೇಶ ಮತ್ತು ಅರಣ್ಯದ ಸಮೀಪವಿದ್ದ ಕಾಫಿತೋಟ ಬೆಂಕಿಗಾಹುತಿಯಾಗಿದೆ.
ಬುಧವಾರ ಮಧ್ಯಾಹ್ನ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಅಗ್ನಿಶಾಮಕದಳ ಸ್ಥಳಕ್ಕೆ ಬರುವ ವೇಳೆಗೆ ಹತ್ತಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದ್ದು ಉರಿಯುತ್ತಿದ್ದ ಬೆಂಕಿಯನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ನಂದಿಸಿದರು.
Next Story





