ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸೂರಜ್ ಪಾಲ್ ಅಮು ರಾಜೀನಾಮೆ

ಹೊಸದಿಲ್ಲಿ, ಜ.31: ಪದ್ಮಾವತ್ ಚಿತ್ರದ ಬಗ್ಗೆ ಹೇಳಿಕೆ ನೀಡಿದ ವಿವಾದ ಸೃಷ್ಟಿಸಿದ್ದ ಬಿಜೆಪಿ ನಾಯಕ ಸೂರಜ್ ಪಾಲ್ ಅಮು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಅಮು ಪದ್ಮಾವತ್ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದ ಶ್ರೀ ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದಾರೆ. ಪದ್ಮಾವತ್ ಬಿಡುಗಡೆಗೆ ಸಂಬಂಧಿಸಿ ಶಾಂತಿಭಂಗ ಮಾಡಿದ್ದಕ್ಕಾಗಿ ಜನವರಿ 25ರಂದು ಅವರನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದರು. ಆದರೆ 5 ದಿನಗಳ ನಂತರ ಜಾಮೀನು ಲಭಿಸಿತ್ತು.
ಪದ್ಮಾವತ್ ಚಿತ್ರದ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದ ಈ ಬಿಜೆಪಿ ನಾಯಕ ದೀಪಿಕಾ ಪಡುಕೋಣೆ ಹಾಗು ಸಂಜಯ್ ಲೀಲಾ ಭನ್ಸಾಲಿ ತಲೆಗೆ 10 ಕೋಟಿ ರೂ. ಬಹುಮಾನ ಘೋಷಿಸಿ ವಿವಾದ ಸೃಷ್ಟಿಸಿದ್ದರು.
Next Story