ಪಿಲಿಕುಳ ವಿಜ್ಞಾನ ಕೇಂದ್ರ, ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಚಂದ್ರ ಗ್ರಹಣ ವೀಕ್ಷಣೆ

ಮಂಗಳೂರು, ಜ.31: ನಗರದ ಕುಲಶೇಖರದಲ್ಲಿ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ ಪಿಲಿಕುಳ ವಿಜ್ಞಾನ ಕೇಂದ್ರದ ವತಿಯಿಂದ ಚಂದ್ರ ಗ್ರಹಣ ವೀಕ್ಷಣೆ ನಡೆಯಿತು.
ರಾತ್ರಿ 7.37 ಗಂಟೆಗೆ ಖಂಡಗ್ರಾಸ ಚಂದ್ರ ಗ್ರಹಣ ಪೂರ್ಣಗೊಂಡು 8.57ಗಂಟೆಗೆ ಗ್ರಹಣ ಕಳೆದು ಹೊಳೆಯುವ ಪೂರ್ಣ ಚಂದ್ರ ಬಾಳಿನಲ್ಲಿ ಗೋಚರಿಸಿತು. ಹವ್ಯಾಸಿ ಖಗೋಳ ತಜ್ಞ ರಾದ ಜಯಂತ್ ಹಾಗೂ ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ.ರಾವ್ ನರೆದಿದ್ದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಚಂದ್ರಗ್ರಹಣ ದ ಬಗ್ಗೆ ಹಾಗೂ ಆಕಾಶ ಕಾಯಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಿದರು.
Next Story





