ಟ್ರಂಪ್ ಜೊತೆ ಸಂಬಂಧ ಆರೋಪ: ನೀಲಿಚಿತ್ರ ನಟಿ ಸ್ಟಾರ್ಮಿ ಹೇಳಿದ್ದೇನು?

ನ್ಯೂಯಾರ್ಕ್,ಜ.31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ತನಗೆ 2006ರಲ್ಲಿ ಲೈಂಗಿಕ ಸಂಬಂಧವಿತ್ತೆಂಬ ಆರೋಪಗಳನ್ನು ನೀಲಿ ಚಿತ್ರಗಳ ನಟಿ ಸ್ಟಾರ್ಮಿ ಡೇನಿಯಲ್ಸ್ ಮಂಗಳವಾರ ನಿರಾಕರಿಸಿದ್ದಾರೆ. ಮಂಗಳವಾರ ಈ ಬಗ್ಗೆ ಆಕೆ ಹೇಳಿಕೆಯೊಂದನ್ನು ನೀಡಿದ್ದು, ಟ್ರಂಪ್ ಜೊತೆಗೆ ತನಗೆ ಯಾವತ್ತೂ ದೈಹಿಕ ಸಂಬಂಧವಿರಲಿಲ್ಲವೆಂದು ಆಕೆ ಹೇಳಿದ್ದಾರೆ.
ಡೇನಿಯಲ್ಸ್ ಅವರ ವಕೀಲರಾದ ಕೀತ್ ಡೇವಿಡ್ಸನ್ ಕೂಡಾ ನಟಿಯ ಹೇಳಿಕೆಯನ್ನು ದೃಢಪಡಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.
ಸ್ಟಾರ್ಮಿ ಡೇನಿಯಲ್ಸ್ ಜೊತೆ ಸಂಬಂಧವಿರುವುದನ್ನು ಬಹಿರಂಗಪಡಿಸದಿರಲು, ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಭಾರೀ ಮೊತ್ತದ ಹಣವನ್ನು ನೀಡಿದ್ದರೆಂದು ಅಮೆರಿಕದ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.
Next Story





