ಶೌಚಾಲಯಗಳು ಹೀಗೇಕೆ?
ಮಾನ್ಯರೇ,
ರಾಜ್ಯದಲ್ಲಿನ ಪ್ರಮುಖ ನಗರ ಪ್ರದೇಶಗಳಲ್ಲಿ ಸಾರ್ವಜನಿಕರ ನಿತ್ಯ ಕರ್ಮದ ಅನುಕೂಲಕ್ಕಾಗಿ ಹಣ ಪಾವತಿಸಿ ಉಪಯೋಗಿಸುವಂತಹ ಸುಲಭ ಶೌಚಾಲಯಗಳಿದ್ದು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ.ಶೌಚಾಲಯ ಹೊರ ಗೋಡೆಯ ಮೇಲೆ ‘ಮಲ ವಿಸರ್ಜನೆಗೆ 5 ರೂ. ಮೂತ್ರ ವಿಸರ್ಜನೆ ಉಚಿತ’ ಎಂಬ ಬರಹ ನೋಡಲು ಮಾತ್ರ. ಹೆಚ್ಚಿನ ಕಡೆ ಮಲ ವಿಸರ್ಜನೆಗೆ 7 ರಿಂದ 10 ರೂ., ಮೂತ್ರ ವಿಸರ್ಜನೆಗೆ 2 ರಿಂದ 3ರೂ. ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಸಾರ್ವಜನಿಕರಿಗೆ ಧ್ವನಿ ಎತ್ತರಿಸಿ ಮಾತಾಡುತ್ತಾರೆ. ಈ ಶೌಚಾಲಯಗಳ ಟೆಂಡರ್ ಬಿಹಾರ, ರಾಜಸ್ಥಾನ, ಗುಜರಾತ್ನ ಮಾರ್ವಾಡಿಗಳ ಪಾಲಾಗಿರುವುದರಿಂದ ಇವರೆಲ್ಲ ಕನ್ನಡ ಮಾತಾಡಲು ಕಲಿಯದಿದ್ದರೂ ಅಹಂಕಾರದಿಂದ ವ್ಯವಹರಿಸುವುದನ್ನು ನಿಲ್ಲಿಸುವುದಿಲ್ಲ. ಅಲ್ಲದೆ ಹೆಚ್ಚಿನ ಶೌಚಾಲಯಗಳಲ್ಲಿ ಸ್ವಲ್ಪವೂ ಸ್ವಚ್ಛತೆ ಇಲ್ಲ. ಬೀಡಿ-ಸಿಗರೇಟ್ ಮತ್ತು ಮಲ, ಮೂತ್ರದ ದುರ್ವಾಸನೆ ತಡೆಯಲು ಆಗುವುದಿಲ್ಲ. ಕೆಲವು ಶೌಚಾಲಯಗಳ ಬಾಗಿಲುಗಳೇ ತೂತಾಗಿದ್ದು, ಗೋಡೆಯ ಒಳ ಭಾಗದಲ್ಲಿ ಅಶ್ಲೀಲ ಚಿತ್ರ ಮತ್ತು ಬರಹಗಳಿರುತ್ತದೆ. ಆದ್ದರಿಂದ ಈ ಶೌಚಾಲಯಗಳಿಗೆ ಸಂಬಂಧಿಸಿದ ಅಧಿಕಾರಿಗಳು ಇವರ ದುಬಾರಿ ಶುಲ್ಕ ವಸೂಲಿಗೆ ಕಡಿವಾಣ ಹಾಕಬೇಕು. ಅಲ್ಲದೆ ಶೌಚಾಲಯದ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಡಿಕೊಳ್ಳುವಂತೆ ಎಚ್ಚರಿಕೆ ನೀಡಬೇಕು.
-ಮೌಲಾಲಿ ಕೆ. ಬೋರಗಿ, ಸಿಂದಗಿ