ಪಶ್ಚಿಮ ಬಂಗಾಳ ಉಪಚುನಾವಣೆ: 2 ಕ್ಷೇತ್ರಗಳಲ್ಲೂ ತೃಣಮೂಲ ಕಾಂಗ್ರೆಸ್ ಜಯಭೇರಿ
ಬಿಜೆಪಿಗೆ ಹೀನಾಯ ಸೋಲು

ಕೊಲ್ಕತ್ತಾ, ಫೆ.1: ಪಶ್ಚಿಮ ಬಂಗಾಳದ ಉಲುಬೆರಿಯಾ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸಜ್ದಾ ಅಹ್ಮದ್ ಬಿಜೆಪಿಯ ಅನುಪಮ್ ಮಲ್ಲಿಕ್ ರನ್ನು 4,74,023 ಮತಗಳ ಅಂತರದಲ್ಲಿ ಮಣಿಸಿದ್ದಾರೆ.
ಜನವರಿ 29ರಂದು ಇಲ್ಲಿಗೆ ಮತದಾನ ನಡೆದಿತ್ತು. ಇಲ್ಲಿ ತೃಣಮೂಲ ಕಾಂಗ್ರೆಸ್ ಹಾಗು ಬಿಜೆಪಿ ಬದ್ಧ ವೈರಿಗಳಾಗಿದ್ದು, ಆರಂಭದಿಂದಲೇ ಸಜ್ದಾ ಅಹ್ಮದ್ ಮುನ್ನಡೆ ಕಾಯ್ದುಕೊಂಡಿದ್ದರು.
ಈಗಾಗಲೇ ಮತ್ತೊಂದು ಕ್ಷೇತ್ರ ನೊಪಾರದಲ್ಲೂ ಟಿಎಂಸಿ ಭರ್ಜರಿ ಜಯ ಗಳಿಸಿದೆ. ನೊಪಾರದಲ್ಲಿ ಟಿಎಂಸಿ ಅಭ್ಯರ್ಥಿ ಸುನೀಲ್ ಸಿಂಗ್ 60 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ಟಿಎಂಸಿ ಸಂಸದ ಸುಲ್ತಾನ್ ಅಹ್ಮದ್ ನಿಧನದಿಂದ ಉಲುಬೇರಿಯಾ ಹಾಗು ಕಾಂಗ್ರೆಸ್ ನ ಮಧುಸೂದನ್ ಘೋಸೆ ನಿಧನದ ಹಿನ್ನೆಲೆಯಲ್ಲಿ ಈ ಸ್ಥಾನಗಳಿಗಾಗಿ ಮತ್ತೊಮ್ಮೆ ಚುನಾವಣೆ ನಡೆದಿದೆ.
Next Story