ರಾಜಸ್ಥಾನ: ಅಜ್ಮೀರ್, ಆಲ್ವಾರ್ ನಲ್ಲೂ ಕಾಂಗ್ರೆಸ್ ಜಯಭೇರಿ
►ವಸುಂಧರಾ ರಾಜೆ ಸರಕಾರಕ್ಕೆ ಮುಖಭಂಗ ►3 ಸ್ಥಾನಗಳನ್ನೂ ಕಳೆದುಕೊಂಡ ಬಿಜೆಪಿ

ಜೈಪುರ್, ಫೆ.1: ರಾಜಸ್ಥಾನದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತಎಣಿಕೆ ಮುಗಿದಿದ್ದು, ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ. ಈಗಾಗಲೇ ಮಂಡಲ್ ಗರ್ ವಿಧಾನಸಭಾ ಕ್ಷೇತ್ರವನ್ನು ಗೆದ್ದಿರುವ ಕಾಂಗ್ರೆಸ್ ಅಜ್ಮೀರ್ ಹಾಗು ಆಲ್ವಾರ್ ನಲ್ಲೂ ಗೆಲುವಿನ ನಗೆ ಬೀರಿದೆ. ಆಲ್ವಾರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕರಣ್ ಸಿಂಗ್ ಯಾದವ್ 1.97 ಲಕ್ಷ ಮತಗಳ ಅಂತರದಲ್ಲಿ ಜಯಿಸಿದ್ದಾರೆ.
“ನಿಮ್ಮ ಪ್ರತಿಯೊಬ್ಬರ ಬಗ್ಗೆ ಅಭಿಮಾನವಿದೆ. ರಾಜಸ್ಥಾನದ ಜನರು ಬಿಜೆಪಿಯನ್ನು ತಿರಸ್ಕರಿಸಿರುವುದಕ್ಕೆ ಇದು ನಿದರ್ಶನ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಮೂವರು ನಾಯಕರ ನಿಧನದ ನಂತರ ಈ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. “ಈ ಸೋಲಿಗೆ ಕಾರಣವೇನು ಎಂದು ನಾವು ಪರಿಶೀಲಿಸುತ್ತೇವೆ. ಆದರೆ ಉಪಚುನಾವಣೆ ಸಂಪೂರ್ಣ ಚಿತ್ರಣವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಹೇಳಿದ್ದಾರೆ.
Next Story