ಚಾಮರಾಜನಗರದ ಮೊದಲ ಶಾಸಕ ಯು.ಎಂ ಮಾದಪ್ಪ ನಿಧನ
![ಚಾಮರಾಜನಗರದ ಮೊದಲ ಶಾಸಕ ಯು.ಎಂ ಮಾದಪ್ಪ ನಿಧನ ಚಾಮರಾಜನಗರದ ಮೊದಲ ಶಾಸಕ ಯು.ಎಂ ಮಾದಪ್ಪ ನಿಧನ](https://www.varthabharati.in/sites/default/files/images/articles/2018/02/1/UM MADAPPA-.jpg)
ಚಾಮರಾಜನಗರ,ಫೆ.01: ಕರ್ನಾಟಕ ವಿಧಾನ ಸಭೆಯ ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಮೊದಲ ಶಾಸಕ ಯು ಎಂ ಮಾದಪ್ಪ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.
ಯು.ಎಂ. ಮಾದಪ್ಪರವರು ಕರ್ನಾಟಕದ ಮೊದಲ ವಿಧಾನ ಸಭೆಯ ಸದಸ್ಯರಾಗಿ ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಬೆಂಗಳೂರಿನ ಎಂ.ಎಸ್. ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಮದ್ಯಾಹ್ನದ ವೇಳೆಗೆ ಯು ಎಂ. ಮಾದಪ್ಪರವರು ಮೃತರಾದರು ಎಂದು ಮಾಜಿ ಶಾಸಕ ಯು ಎಂ ಮಾದಪ್ಪರವರ ಕುಟುಂಬದ ಮೂಲಗಳು ತಿಳಿಸಿದೆ.
ಮೃತ ಯು ಎಂ ಮಾದಪ್ಪರವರ ಪಾರ್ಥಿವ ಶರೀರವನ್ನು ರಾತ್ರಿ ವೇಳೆಗೆ ಅವರ ತವರೂರಾದ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮಕ್ಕೆ ತರಲಾಗುವುದು ಹಾಗೂ ಶುಕ್ರವಾರ ವೀರಶೈವ ಪದ್ದತಿಯಂತೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿದೆ.
Next Story