ಮುಂಡಗೋಡ: ಪಟ್ಟಣ ಪಂಚಾಯತ್ ನಿಂದ 500 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶ

ಮುಂಡಗೋಡ,ಫೆ.01 : ತಹಶೀಲ್ದಾರ ಅಶೋಕ ಗುರಾಣಿಯವರ ನೇತೃತ್ವದಲ್ಲಿ ಗುರುವಾರ ಸಂಜೆ ಪಟ್ಟಣ ಪಂಚಾಯತ್ ಸಿಬ್ಬಂದಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿರುವ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ತೋರಣ, ಪ್ಲೇಕ್ಸ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಚಮಚ, ಹಾಳೆ, ಪ್ಲಾಸ್ಟಿಕ್ ಮೈಕ್ರೊ ವಸ್ತುಗಳನ್ನು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಬೇಕರಿ, ಚಿಕನ್ ಅಂಗಡಿ, ಬಟ್ಟೆಅಂಗಡಿ, ಕಿರಾಣಿ ಅಂಗಡಿ ಸೇರಿದಂತೆ ಇತರೆ ವಾಣಿಜ್ಯ ಅಂಗಡಿಗಳು ಸೇರಿದಂತೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ವಿತರಕರ ಮನೆಗಳಿಗೆ ಭೇಟಿ ನೀಡಿ ಸುಮಾರು 500 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂಗನಬಸಯ್ಯಾ ಗದಗಿಮಠ, ಸಿಎಒ ಎಸ್.ವಾಯ್.ಗೊಣೆಪ್ಪನವರ, ಕಿರಿಯ ಇಂಜನಿಯರ ಶಂಕರ ದಂಡಿನ, ಆರೋಗ್ಯ ನಿರೀಕ್ಷಕ ಮರೆಪ್ಪ ಹಳ್ಳೆಮ್ಮನವರ, ಬಿಲ್ ಕಲೆಕ್ಟ ಮಿಸ್ಕಿನ, ಬೆಂಡಲಗಟ್ಟಿ ಸೇರಿದಂತೆ ಇತರೆ ಸಿಬ್ಬಂದಿಗಳು ಜೊತೆಗಿದ್ದರು.
Next Story





