ಜೇಟ್ಲಿ ಬಜೆಟ್‌ನಲ್ಲಿ ಯಾವುದು ಅಗ್ಗ,ಯಾವುದು ದುಬಾರಿ?

ಹೊಸದಿಲ್ಲಿ,ಫೆ.1: ಮುಂಗಡಪತ್ರದಲ್ಲಿ ಹಲವಾರು ಆಮದು ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಿರುವ ವಿತ್ತಸಚಿವ ಅರುಣ್ ಜೇಟ್ಲಿ ಅವರು ಕೆಲವು ವಸ್ತುಗಳ ಮೇಲಿನ ಸುಂಕವನ್ನು ಇಳಿಸಿದ್ದಾರೆ. ಸೆಲ್‌ಫೋನ್‌ಗಳು, ಕಾರು ಮತ್ತು ಬೈಕ್‌ಗಳು, ಹಣ್ಣಿನ ರಸ, ಸುಗಂಧ ದ್ರವ್ಯ ಮತ್ತು ಪಾದರಕ್ಷೆಗಳು ಸುಂಕ ಏರಿಕೆಯಿಂದಾಗಿ ದುಬಾರಿಯಾಗಲಿರುವ ವಸ್ತುಗಳಲ್ಲಿ ಸೇರಿವೆ.
ಆದರೆ ಕೆಲವು ಆಯ್ದ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಅಗ್ಗವಾಗಲಿರುವ ವಸ್ತುಗಳಲ್ಲಿ ಆಮದು ಮಾಡಲಾದ ಕಚ್ಚಾ ಗೋಡಂಬಿ, ಸೋಲಾರ್ ಟೆಂಪರ್ಡ್ ಗಾಜು, ಶ್ರವಣ ಸಾಧನ ಇತ್ಯಾದಿಗಳು ಸೇರಿವೆ.
►ಇವು ದುಬಾರಿ
ಕಾರುಗಳು ಮತ್ತು ಬೈಕ್‌ಗಳು
ಮೊಬೈಲ್ ಫೋನ್‌ಗಳು
ಚಿನ್ನ ಮತ್ತು ಬೆಳ್ಳಿ
ತರಕಾರಿ ಮತ್ತು ಕಿತ್ತಳೆ ಹಾಗೂ ಕ್ರಾನ್‌ಬೆರಿ ಸೇರಿದಂತೆ ಹಣ್ಣುಗಳು ತಂಪು ಕನ್ನಡಕಗಳು
ಸೋಯಾ ಪ್ರೋಟಿನ್ ಹೊರತುಪಡಿಸಿ ಇತರ ಆಹಾರ ಉತ್ಪನ್ನಗಳು ಸುಗಂಧ ದ್ರವ್ಯಗಳು ಮತ್ತು ಟಾಯ್ಲೆಟ್ ವಾಟರ್
ಸನ್‌ಸ್ಕ್ರೀನ್ ಮತ್ತು ಇತರ ಸೌಂದರ್ಯ ವರ್ಧಕಗಳು
ಬಾಯಿ ಮತ್ತು ಹಲ್ಲುಗಳ ಆರೋಗ್ಯ ಸಾಮಗ್ರಿಗಳು ಮತ್ತು ದಂತಶುದ್ಧಿ ಸಾಧನಗಳು
ಪೇಸ್ಟ್ ಮತ್ತು ಹುಡಿ ಹಾಗು ಡೆಂಟಲ್ ಫ್ಲಾಸ್
ಶೇವಿಂಗ್ ಕ್ರೀಮ್‌ಗಳು ಮತ್ತು ಲೋಷನ್‌ಗಳು
ದುರ್ಗಂಧ ನಿವಾರಕಗಳು
ಸ್ನಾನಗೃಹದ ಉತ್ಪನ್ನಗಳು
ಕ್ಷೌರಸಾಧನಗಳು ಮತ್ತು ಸುಗಂಧ ದ್ರವ್ಯ
ಸೆಂಟ್ ಸ್ಪ್ರೇಗಳು ಮತ್ತು ಟಾಯ್ಲೆಟ್ ಸ್ಪ್ರೇಗಳು
ಟ್ರಕ್ ಮತ್ತು ಬಸ್‌ಗಳ ರೇಡಿಯಲ್ ಟೈರ್‌ಗಳು
ರೇಷ್ಮೆ ವಸ್ತ್ರ
ಪಾದರಕ್ಷೆಗಳು
ಬಣ್ಣದ ಹರಳುಗಳು,ವಜ್ರ
ಇಮಿಟೇಷನ್ ಆಭರಣಗಳು
ಸ್ಮಾರ್ಟ್ ವಾಚ್‌ಗಳು ಮತ್ತು ಮೈಮೇಲೆ ಧರಿಸುವ ಇಲೆಕ್ಟ್ರಾನಿಕ್ ಸಾಧನಗಳು
ಎಲ್‌ಸಿಡಿ/ಎಲ್‌ಇಡಿ ಟಿವಿ ಪ್ಯಾನೆಲ್‌ಗಳು
ಪೀಠೋಪಕರಣಗಳು,ಮ್ಯಾಟ್ರೆಸ್‌ಗಳು
ಲ್ಯಾಂಪ್
ರಿಸ್ಟ್‌ವಾಚ್,ಪಾಕೆಟ್ ವಾಚ್ ಮತ್ತು ಗಡಿಯಾರಗಳು
ಟ್ರೈಸಿಕಲ್,ಸ್ಕೂಟರ್,ಪೆಡಲ್ ಕಾರುಗಳು, ಆಟಿಕೆಗಳು ಮತ್ತು ಬೊಂಬೆಗಳು
ವೀಡಿಯೊ ಗೇಮ್ ಉಪಕರಣಗಳು
ಕ್ರೀಡೆ,ಒಳಾಂಗಣ ಕ್ರೀಡಾಂಗಣ ಮತ್ತು ಈಜುಕೊಳ ಸಲಕರಣೆಗಳು, ಸಿಗರೇಟ್ ಮತ್ತು ಇತರ ಲೈಟರ್‌ಗಳು
ಮೋಂಬತ್ತಿಗಳು
ಗಾಳಿಪಟ,
►ಇವು ಅಗ್ಗ
ಖಾದ್ಯ/ಸಸ್ಯಜನ್ಯ ತೈಲಗಳು
ಕಚ್ಚಾ ಗೋಡಂಬಿ
ಸೋಲಾರ್ ಉಪಕರಣಗಳು
ಶ್ರವಣ ಸಾಧನಗಳ ಬಿಡಿಭಾಗಗಳು
ಆಯ್ದ ಬಂಡವಾಳ ಸರಕುಗಳು ಮತ್ತು ಬಾಲ್ ಸ್ಕ್ರೂನಂತಹ ವಿದ್ಯುನ್ಮಾನ ಸಾಮಗ್ರಿಗಳು