ಉಡುಪಿ: ಪದವಿ ಪರೀಕ್ಷೆಯಲ್ಲಿ ರ್ಯಾಂಕ್
ಉಡುಪಿ, ಫೆ.1: ಮಂಗಳೂರು ವಿಶ್ವವಿದ್ಯಾನಿಲಯವು 2016-17ನೇ ಸಾಲಿ ನಲ್ಲಿ ನಡೆಸಿದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅಜ್ಜರಕಾಡು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಏಳು ಮಂದಿ ವಿದ್ಯಾರ್ಥಿನಿಯರು ರ್ಯಾಂಕ್ ಪಡೆದಿದ್ದಾರೆ.
ಬಿ.ಎಸ್ಸಿಯ ಪಲ್ಲವಿ 6ನೇ ರ್ಯಾಂಕ್, ಬಿ.ಕಾಂನ ಸುಪ್ರೀತ ಕೆದ್ಲಾಯ 9ನೆ ರ್ಯಾಂಕ್, ಎಂ.ಕಾಂನ ದೀಪಾ 4ನೇ ರ್ಯಾಂಕ್, ಶಿಲ್ಪ ಬಂಗೇರ 10ನೇ ರ್ಯಾಂಕ್, ಎಂ.ಎ ಇತಿಹಾಸದಲ್ಲಿ ಸುಮಾ 3ನೆ ರ್ಯಾಂಕ್, ಎಂ.ಎ ರಾಜ್ಯಶಾಸ್ತ್ರದಲ್ಲಿ ಗೀತಾ 2ನೆ ರ್ಯಾಂಕ್ ಮತ್ತು ಸುಮಿತ್ರ ಡಿ.ಎಚ್. 3ನೆ ರ್ಯಾಂಕ್ ಪಡೆದಿದ್ದಾರೆ.
Next Story





