ಕೇಂದ್ರ ಬಜೆಟ್-2018 ಕೊಡುಗೆಗಳು: ಯಾವ್ಯಾವ ಕ್ಷೇತ್ರಕ್ಕೆ ಏನೇನು?

ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ
►ವಿಸಿಎಫ್ (ವೆಂಚರ್ ಕ್ಯಾಪಿಟಲ್ ಫಂಡ್)ಗಳು ಮತ್ತು ಆ್ಯಂಜೆಲ್ ಇನ್‌ವೆಸ್ಟರ್‌ಗಳ ಬೆಳವಣಿಗೆಗೆ ನೂತನ ಕ್ರಮಗಳು ಮತ್ತು ಹೂಡಿಕೆಯನ್ನು ಹೆಚ್ಚಿಸುವುದಕ್ಕಾಗಿ ನೂತನ ತೆರಿಗೆ ನಿಯಮಗಳು.
►ಫೋನ್‌ಗಳು ಮತ್ತು ಟಿವಿಗಳು ಸೇರಿದಂತೆ ಆಮದಿತ ಇಲೆಕ್ಟ್ರಾನಿಕ್ಸ್ ಉಪಕರಣಗಳು ದುಬಾರಿಯಾಗಲಿವೆ. ಮೊಬೈಲ್ ಫೋನ್‌ಗಳ ಮೇಲಿನ ಕಸ್ಟಮ್ ಸುಂಕವನ್ನು 15 ಶೇ.ದಿಂದ 20 ಶೇ.ಕ್ಕೆ ಹಾಗೂ ಕೆಲವು ಮೊಬೈಲ್ ಭಾಗಗಳ ಕಸ್ಟಮ್ ಸುಂಕವನ್ನು 15 ಶೇ.ಕ್ಕೆ ಮತ್ತು ಟಿವಿಗಳ ಕೆಲವು ಭಾಗಗಳ ಕಸ್ಟಮ್ ತೆರಿಗೆಯನ್ನು 15 ಶೇ.ಕ್ಕೆ ಏರಿಸಲು ಸರಕಾರ ಉದ್ದೇಶಿಸಿದೆ.
►ಆರೋಗ್ಯ ಮತ್ತು ಶಿಕ್ಷಣ ಸೆಸ್‌ನ್ನು 4 ಶೇ.ಕ್ಕೆ ಏರಿಸಲು ಪ್ರಸ್ತಾಪ.
ವೈಯಕ್ತಿಕ/ಕಾರ್ಪೊರೇಟ್ ತೆರಿಗೆ
►ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ.
►ವೇತನದಾರರಿಗೆ ತೆರಿಗೆ ವಿನಾಯಿತಿ: ಸಾರಿಗೆ ಮತ್ತು ವೈದ್ಯಕೀಯ ಮರುಪಾವತಿಯ ಸ್ಟಾಂಡರ್ಡ್ ಡಿಡಕ್ಷನ್ (ಕಡಿತ) ಮಿತಿ 15,000 ರೂ.ಯಿಂದ 40,000 ರೂ.ಗೆ ಏರಿಕೆ.
►ಮೆಡಿಕ್ಲೇಮ್‌ನಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ 50,000 ರೂ. ಹೆಚ್ಚುವರಿ ಅನುಕೂಲ.
►ಸ್ಟಾಕ್‌ನಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ದೀರ್ಘಾವಧಿ ಕ್ಯಾಪಿಟಲ್ ಗೇನ್ ಮೇಲೆ 10 ಶೇ. ತೆರಿಗೆ ವಿಧಿಸುವ ಪ್ರಸ್ತಾಪ.
►ರೈತ ಉತ್ಪಾದಕ ಕಂಪೆನಿಗಳೆಂದು ನೋಂದಾಯಿಸುವ ಹಾಗೂ ವಾರ್ಷಿಕ ವ್ಯವಹಾರ 100 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿರುವ ಕಂಪೆನಿಗಳಿಗೆ ಮೊದಲ 5 ವರ್ಷಗಳಲ್ಲಿ 100 ಶೇ. ತೆರಿಗೆ ವಿನಾಯಿತಿ.
►ಈ ವರ್ಷ 41 ಶೇ. ಹೆಚ್ಚು ರಿಟರ್ನ್ (ಆದಾಯ ವಿವರಗಳು)ಗಳ ಸಲ್ಲಿಕೆಯಾಗಿದ್ದು, ಹೆಚ್ಚು ಜನರು ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ.
►ತೆರಿಗೆದಾರರ ಪ್ರಮಾಣವು 2014-15ರ ಅವಧಿಯಲ್ಲಿದ್ದ 6.47 ಕೋಟಿಗಿಂತ 2016-17ರ ಅವಧಿಯಲ್ಲಿ 8.27 ಕೋಟಿಗೆ ಹೆಚ್ಚಿದೆ. ಹೆಚ್ಚು ತೆರಿಗೆದಾರರು ತೆರಿಗೆ ವ್ಯಾಪ್ತಿಗೆ ಬರುತ್ತಿದ್ದಾರೆ, ಆದರೆ ವ್ಯವಹಾರ ಪ್ರೋತ್ಸಾಹದಾಯಕವಾಗಿಲ್ಲ.
►ನೋಟು ನಿಷೇಧವನ್ನು ಪ್ರಾಮಾಣಿಕ ತೆರಿಗೆ ಪಾವತಿದಾರರು ‘ಇಮಾಂದಾರಿ ಕಾ ಉತ್ಸವ್’ (ಪ್ರಾಮಾಣಿಕತೆಯ ಉತ್ಸವ)ವನ್ನಾಗಿ ಸ್ವೀಕರಿಸಿದ್ದಾರೆ.
ವಿತ್ತೀಯ ಕೊರತೆ
►2017-18ರ ಪರಿಷ್ಕೃತ ವಿತ್ತೀಯ ಕೊರತೆ ಅಂದಾಜು ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ 3.5 ಶೇ. ಹಾಗೂ 2018-19ರ ಅಂದಾಜು 3.3 ಶೇ.
ಟೆಲಿಕಾಂ
►2018-19ರಲ್ಲಿ 5 ಕೋಟಿ ಗ್ರಾಮೀಣ ಜನರಿಗೆ ಇಂಟರ್‌ನೆಟ್ ಒದಗಿಸಲು 5 ಲಕ್ಷ ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಸರಕಾರ ನಿರ್ಧಾರ.
►2018-19ರಲ್ಲಿ ಟೆಲಿಕಾಂ ಮೂಲಸೌಕರ್ಯ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಸರಕಾರದಿಂದ 10,000 ಕೋಟಿ ರೂ.
►ಐಐಟಿ ಮೆಡ್ರಾಸ್‌ನಲ್ಲಿ ಸ್ವದೇಶಿ 5ಜಿ ಕೇಂದ್ರ ಸ್ಥಾಪಿಸಲು ದೂರಸಂಪರ್ಕ ಇಲಾಖೆಯಿಂದ ಬೆಂಬಲ.
►ಬಿಟ್ ಕಾಯಿನ್ ಮುಂತಾದ ಕ್ರಿಪ್ಟೊಕರೆನ್ಸಿಗಳನ್ನು ಸರಕಾರ ಅಧಿಕೃತ ಕರೆನ್ಸಿಯಾಗಿ ಪರಿಗಣಿಸುವುದಿಲ್ಲ.
ರೈಲು ಬಜೆಟ್
►2018-19ರಲ್ಲಿ ಭಾರತೀಯ ರೈಲ್ವೆಯ ಒಟ್ಟು ವೆಚ್ಚ 1,48,528 ಕೋಟಿ ರೂ. ಎಲ್ಲ ರೈಲುಗಳಲ್ಲಿ ಹಂತ ಹಂತವಾಗಿ ವೈಫೈ, ಸಿಸಿಟಿವಿ ಮತ್ತು ಇತರ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲಾಗುವುದು.
►25,000ಕ್ಕಿಂತ ಅಧಿಕ ಜನರು ಪ್ರವೇಶಿಸುವ ಎಲ್ಲ ರೈಲು ನಿಲ್ದಾಣಗಳಿಗೆ ಎಸ್ಕಲೇಟರ್‌ಗಳನ್ನು ಒದಗಿಸಲಾಗುವುದು.
►12,000 ವ್ಯಾಗನ್‌ಗಳು, 5160 ಕೋಚ್‌ಗಳು ಮತ್ತು 700 ಲೊಕೊಮೋಟಿವ್ (ಎಂಜಿನ್)ಗಳನ್ನು ಒದಗಿಸಲಾಗುವುದು. ಭೌತಿಕ ಗುರಿಗಳ ಸಾಧನೆಯಲ್ಲಿ ರೈಲ್ವೆ ಇಲಾಖೆಯು ಗಮನಾರ್ಹ ಯಶಸ್ಸು ಪಡೆದಿದೆ: ಅರುಣ್ ಜೇಟ್ಲಿ
►ಸುರಕ್ಷತೆ, ರೈಲು ಹಳಿಗಳ ನಿರ್ವಹಣೆ, ತಂತ್ರಜ್ಞಾನ ಬಳಕೆಯಲ್ಲಿ ಹೆಚ್ಚಳ ಮತ್ತು ಮಂಜು ವೀಕ್ಷಣೆ ಉಪಕರಣಗಳಿಗೆ ಹೆಚ್ಚಿನ ಗಮನ ನೀಡಲಾಗುವುದು: ಜೇಟ್ಲಿ
►600 ಪ್ರಮುಖ ರೈಲು ನಿಲ್ದಾಣಗಳ ನವೀಕರಣ ಕೈಗೆತ್ತಿಕೊಳ್ಳಲಾಗಿದೆ; ಮುಂಬೈ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ; ಬೆಂಗಳೂರಿನಲ್ಲಿ 160 ಕಿ.ಮೀ. ಉಪನಗರ ರೈಲು ಜಾಲಕ್ಕೆ ಯೋಜನೆ: ಜೇಟ್ಲಿ
►ಬುಲೆಟ್ ರೈಲಿಗೆ 2017ರ ಸೆಪ್ಟಂಬರ್‌ನಲ್ಲಿ ಶಂಕುಸ್ಥಾಪನೆ. ಹೈಸ್ಪೀಡ್ ರೈಲ್ವೆ ಯೋಜನೆಗಳಿಗೆ ಅಗತ್ಯವಾದ ಸಿಬ್ಬಂದಿಗೆ ತರಬೇತಿ ನೀಡಲು ವಡೋದರದಲ್ಲಿ ಸಂಸ್ಥೆಯೊಂದರ ಸ್ಥಾಪನೆ: ಜೇಟ್ಲಿ
ಕೃಷಿ
►ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 2000 ಕೋಟಿ ರೂಪಾಯಿ ಮೂಲಧನದೊಂದಿಗೆ ಕೃಷಿ-ಮಾರುಕಟ್ಟೆ ಅಭಿವೃದ್ಧಿ ನಿಧಿ ಸ್ಥಾಪನೆ.
►ಗ್ರಾಮೀಣ್ ಕೃಷ್ಟಿ ಮಾರುಕಟ್ಟೆ (ಗ್ರಾಮ್) ಮೂಲಕ ರೈತರು ತಮ್ಮ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಬಹುದು.
►ಕಡಿಮೆ ವೆಚ್ಚದ ಕೃಷಿ ಮತ್ತು ಹೆಚ್ಚಿನ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೆ ಒತ್ತು. ರೈತರಿಗೆ ಕೃಷಿ ಮತ್ತು ಕೃಷಿಯೇತರ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ.
►ಖಾರಿಫ್ ಬೆಲೆಗೆ ಉತ್ಪಾದನಾ ವೆಚ್ಚದ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ.
►ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಿದರೂ, ಪೂರ್ಣ ಕನಿಷ್ಠ ಬೆಂಬಲ ಬೆಲೆ ಪಾವತಿಗೆ ಸರಕಾರದಿಂದ ಕ್ರಮ.
►ಎಲ್ಲ ಬೆಲೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟಿಗೆ ನಿಗದಿ.
ಆರೋಗ್ಯ
ಆರೋಗ್ಯ ರಕ್ಷಣೆ ಯೋಜನೆಯನ್ವಯ ಸುಮಾರು 10 ಕೋಟಿ ಬಡ ಮತ್ತು ಅಶಕ್ತ ಕುಟುಂಬಗಳಿಗೆ ನೆರವು. ಈ ಯೋಜನೆ ಮೂಲಕ ಕುಟುಂಬವೊಂದಕ್ಕೆ 5 ಲಕ್ಷ ರೂ.ವರೆಗೆ ಖರ್ಚು. ಇದು ಜಗತ್ತಿನ ಅತಿ ದೊಡ್ಡ ಸರಕಾರಿ ಅನುದಾನಿತ ಕಾರ್ಯಕ್ರಮ.
►2017ರ ರಾಷ್ಟ್ರೀಯ ಆರೋಗ್ಯ ನೀತಿಯನ್ವಯ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆ. ಇಂಥ ಸುಮಾರು 1.5 ಲಕ್ಷ ಕೇಂದ್ರಗಳ ಮೂಲಕ ಅಗತ್ಯ ಔಷಧಿಗಳು, ಬಾಣಂತಿ ಮತ್ತು ಶಿಶು ಸೇವೆಗಳು. ಯೋಜನೆಗೆ ಹಣಕಾಸು ಇಲಾಖೆಯಿಂದ 1,200 ಕೋಟಿ ರೂ.
►ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ 500 ರೂ.
►ಕನಿಷ್ಠ 24 ನೂತನ ಸರಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸ್ಥಾಪನೆ. ಈಗಿನ ಜಿಲ್ಲಾ ಸರಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ.
ಮಹಿಳೆಯರು
►ಹೊಸದಾಗಿ ನೇಮಕಗೊಂಡ ಮಹಿಳಾ ಉದ್ಯೋಗಿಗಳಿಗಾಗಿ 3 ವರ್ಷಗಳ ಕಾಲ ಸರಕಾರದಿಂದ ಭವಿಷ್ಯ ನಿಧಿಗೆ 8.33 ಶೇ. ದೇಣಿಗೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುವ ಕ್ಷೇತ್ರಗಳಲ್ಲಿ ಭವಿಷ್ಯ ನಿಧಿಗೆ ಸರಕಾರದಿಂದ 12 ಶೇ. ದೇಣಿಗೆ.
►ಮಹಿಳೆಯರಿಗೆ 76ಶೇ. ಮುದ್ರಾ ಸಾಲ.
►ಬಡ ಮಹಿಳೆಯರಿಗೆ ಉಚಿತವಾಗಿ ನೀಡುವ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆಯನ್ನು 8 ಕೋಟಿಗೆ ಏರಿಸಲು ಸರಕಾರದಿಂದ ಪ್ರಸ್ತಾಪ.
ಶಿಕ್ಷಣ
►ಪ್ರತಿ 3 ಲೋಕಸಭಾ ಕ್ಷೇತ್ರಗಳಿಗೆ 1 ವೈದ್ಯಕೀಯ ಕಾಲೇಜು.
►1,000 ಶ್ರೇಷ್ಠ ಬಿಟೆಕ್ ವಿದ್ಯಾರ್ಥಿಗಳನ್ನು ಪ್ರಧಾನಿ ರಿಸರ್ಚ್ ಫೆಲೊಗಳಾಗಿ ನೇಮಕ. ಅವರು ಐಐಟಿಗಳು ಮತ್ತು ಐಐಎಸ್‌ಸಿಗಳಲ್ಲಿ ಪಿಎಚ್‌ಡಿ ಮಾಡುತ್ತಾರೆ. ಅವರು ಪ್ರತಿ ವಾರ ಕೆಲವು ಗಂಟೆಗಳ ಕಾಲ ತಾಂತ್ರಿಕ ಸಂಸ್ಥೆಗಳಲ್ಲಿ ಪಾಠ ಮಾಡುತ್ತಾರೆ.
►18 ನೂತನ ಯೋಜನಾ ಮತ್ತು ವಾಸ್ತುಶಿಲ್ಪ ಶಾಲೆಗಳ ನಿರ್ಮಾಣ. ವಡೋದರದಲ್ಲಿ ರೈಲ್ವೆ ವಿಶ್ವವಿದ್ಯಾನಿಲಯ
►2022ರ ವೇಳೆಗೆ ಶಿಕ್ಷಣದಲ್ಲಿ ಪುನಶ್ಚೇತನ ಮೂಲಸೌಕರ್ಯ ಮತ್ತು ವ್ಯವಸ್ಥೆ ಜಾರಿ.
►ಶಿಕ್ಷಕರ ಗುಣಮಟ್ಟ ವೃದ್ಧಿಗಾಗಿ ಶಿಕ್ಷಕರಿಗಾಗಿ ಸಮಗ್ರ ಬಿಎಡ್ ಕಾರ್ಯಕ್ರಮಕ್ಕೆ ಚಾಲನೆ.
►ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವಲ್ಲಿ ತಂತ್ರಜ್ಞಾನದ ಗರಿಷ್ಠ ಬಳಕೆ.
►ಶಿಕ್ಷಣದ ಗುಣಮಟ್ಟದ ವೃದ್ಧಿಸಲು ಹೆಚ್ಚಿನ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲಿರುವ ಬಜೆಟ್ 2018.
ಭಾರತದ ಅಭಿವೃದ್ಧಿ
►8 ಶೇ. ಬೆಳವಣಿಗೆ ಸಾಧಿಸುವತ್ತ ಭಾರತೀಯ ಆರ್ಥಿಕತೆ; 2018-19ರ ಉತ್ತರಾರ್ಧದಲ್ಲಿ 7.2-7.5 ಶೇ. ಅಭಿವೃದ್ಧಿ ಸಾಧಿಸಲಿರುವ ಆರ್ಥಿಕತೆ: ಜೇಟ್ಲಿ
►2014ರ ಬಳಿಕದ 3 ವರ್ಷಗಳಲ್ಲಿ ಭಾರತೀಯ ಆರ್ಥಿಕತೆ ಸರಾಸರಿ 7.5 ಶೇ. ಏರಿಕೆ. ಈಗ ಭಾರತದ ಆರ್ಥಿಕತೆ 2.5 ಟ್ರಿಲಿಯನ್ ಡಾಲರ್ (ಸುಮಾರು 1.6 ಕೋಟಿ ಕೋಟಿ ರೂಪಾಯಿ): ಜೇಟ್ಲಿ
►ಆರ್ಥಿಕ ವ್ಯವಹಾರಗಳಿಂದ ಸ್ಟಾಂಪ್ ಡ್ಯೂಟಿಯನ್ನು ತೆಗೆದು ಹಾಕಲು ಸರಕಾರದಿಂದ ಕ್ರಮ.
ಮೂಲಸೌಕರ್ಯ
►ಗ್ರಾಮೀಣ ಮೂಲಸೌಕರ್ಯಕ್ಕಾಗಿ 14.34 ಲಕ್ಷ ಕೊಟಿ ರೂಪಾಯಿ ಖರ್ಚು ಮಾಡಲು ಪ್ರಸ್ತಾಪ.
ಬಡವರು, ಹಿಂದುಳಿದವರು ಮತ್ತು ಅಶಕ್ತರಿಗಾಗಿ
►2022ರ ವೇಳೆಗೆ 50 ಶೇ.ಕ್ಕಿಂತ ಅಧಿಕ ಪರಿಶಿಷ್ಟ ಪಂಗಡದ ಜನಸಂಖ್ಯೆಯಿರುವ ಹಾಗೂ ಕನಿಷ್ಠ 20,000 ಬುಡಕಟ್ಟು ಜನರಿರುವ ಪ್ರತಿ ಬ್ಲಾಕ್‌ನಲ್ಲಿ ನವೋದಯ ವಿದ್ಯಾಲಯಗಳಿಗೆ ಸರಿಸಮಾನವಾದ ‘ಏಕಲವ್ಯ’ ಶಾಲೆಗಳ ಸ್ಥಾಪನೆ.
►ಪರಿಶಿಷ್ಟ ಜಾತಿ ಜನರ ಕಲ್ಯಾಣಕ್ಕಾಗಿ 56,619 ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ 39,135 ಕೋಟಿ ರೂ.
ಭಾರತ ಸಂಪರ್ಕ
►ಉತ್ತಮ ರಸ್ತೆ ಸಂಪರ್ಕಕ್ಕಾಗಿ 5.35 ಲಕ್ಷ ಕೋಟಿ ರೂ. ವೆಚ್ಚದಲ್ಲಿ ‘ಭಾರತ್ ಮಾಲಾ’ ಯೋಜನೆ.
►‘ಉಡಾನ್’ ಮೂಲಕ ಭಾರತದಲ್ಲಿರುವ 56 ವಿಮಾನ ನಿಲ್ದಾಣಗಳ ಜೋಡಣೆ.
►ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಬಳಿ ಈಗ 124 ವಿಮಾನ ನಿಲ್ದಾಣಗಳು. ಇನ್ನು ಇವುಗಳ ಸಂಖ್ಯೆ 5 ಪಟ್ಟು ಏರಿಕೆ. ವರ್ಷಕ್ಕೆ 100 ಕೋಟಿ ಹಾರಾಟದ ಯೋಜನೆ.
ಇತರ ಪ್ರಸ್ತಾಪಗಳು
►‘ನಮಾಮಿ ಗಂಗೆ’ ಕಾರ್ಯಕ್ರಮದನ್ವಯ ಒಟ್ಟು 187 ಯೋಜನೆಗಳು.
►2022ರ ವೇಳಗೆ ಎಲ್ಲ ಬಡವರಿಗೆ ವಾಸಿಸಲು ಮನೆ.
►‘ಸ್ವಚ್ಛ ಭಾರತ ಮಿಶನ್’ ಅನ್ವಯ 2 ಕೋಟಿ ಶೌಚಾಲಯಗಳ ನಿರ್ಮಾಣ.
►‘ಅಮೃತ್’ ಕಾರ್ಯಕ್ರಮದನ್ವಯ 500 ನಗರಗಳಿಗೆ ನೀರು ಪೂರೈಕೆ.