ಬಜೆಟ್ 2018: ದಲಿತರಿಗೆ, ಬುಡಕಟ್ಟು ಜನರಿಗೆ ಅನುದಾನದಲ್ಲಿ ಹೆಚ್ಚಳ

ಹೊಸದಿಲ್ಲಿ, ಫೆ.1: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ವರ್ಗ(ಎಸ್‌ಟಿ)ದವರಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನವನ್ನು ಹೆಚ್ಚಿಸಲಾಗಿದ್ದು ಅನುಕ್ರಮವಾಗಿ 56,619 ಕೋಟಿ ರೂ. ಹಾಗೂ 39,135 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 2017-18ರಲ್ಲಿ ಈ ಮೊತ್ತ ಕ್ರಮವಾಗಿ 52,719 ಕೋಟಿ ರೂ. ಹಾಗೂ 32,508 ಕೋಟಿ ರೂ. ಆಗಿತ್ತು.
Next Story