ಕೋಟ: ಬೈಕ್ ಪಲ್ಟಿಯಾಗಿ ಸವಾರ ಮೃತ್ಯು
ಕೋಟ, ಫೆ.1: ಆವರ್ಸೆ ಗ್ರಾಮದ ಟೆಲಿಫೋನ್ ಎಕ್ಸ್‌ಚೇಂಜ್ ಎದುರಿನ ಕೋಟ-ಗೋಳಿಯಂಗಡಿ ರಸ್ತೆ ತಿರುವಿನಲ್ಲಿ ಜ. 31ರಂದು ಬೆಳಗ್ಗೆ ಬೈಕೊಂದು ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಗೇರು ಬೀಜದ ಫ್ಯಾಕ್ಟರಿಯ ಕಾರು ಚಾಲಕ ಶಿವರಾಜ್ ಕುಮಾರ್ ಮಹಾರಾಜ್ ಎಂದು ಗುರುತಿಸಲಾಗಿದೆ. ಇವರು ಫ್ಯಾಕ್ಟರಿಯಿಂದ ಇಎಸ್‌ಐ ಸಂಬಂಧ ಭಾವಚಿತ್ರ ತೆಗೆಸಿ, ಅದರ ಪ್ರಿಂಟ್ ಕಾಪಿ ತರಲು ಬೈಕಿನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಅವರು ಆವರ್ಸೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





