ಘನತ್ಯಾಜ್ಯ ನಿರ್ವಹಣೆಗೆ ‘ಗೋಬರ್-ಧನ್’ ಯೋಜನೆ
ಕೇಂದ್ರ ಬಜೆಟ್-2018

ಹೊಸದಿಲ್ಲಿ,ಫೆ.1: ಮುಂದಿನ ಹಣಕಾಸು ವರ್ಷದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ದೇಶಾದ್ಯಂತ ಎರಡು ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಅಲ್ಲದೆ ಘನತ್ಯಾಜ್ಯ ನಿರ್ವಹಣೆಗಾಗಿ ‘ಗೋಬರ್-ಧನ್’ ನೂತನ ಯೋಜನೆಯನ್ನೂ ಕೇಂದ್ರ ಸರಕಾರವು 2018-19ನೇ ಸಾಲಿನ ಮುಂಗಡಪತ್ರದಲ್ಲಿ ಪ್ರಕಟಿಸಿದೆ.
ಸ್ವಚ್ಛ ಭಾರತ ಅಭಿಯಾನದಡಿ ಈಗಾಗಲೇ ಆರು ಕೋಟಿಗೂ ಅಧಿಕ ಶೌಚಾಲಯ ಗಳನ್ನು ನಿರ್ಮಿಸಲಾಗಿದೆ. ಮಹಿಳೆಯರ ಘನತೆ, ಬಾಲಕಿಯರ ಶಿಕ್ಷಣ ಮತ್ತು ಕುಟುಂಬದ ಒಟ್ಟಾರೆ ಆರೋಗ್ಯದ ಮೇಲೆ ಈ ಶೌಚಾಲಯಗಳ ಧನಾತ್ಮಕ ಪರಿಣಾಮ ಕಾಣತೊಡಗಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದರು.
2019,ಅ.2ರೊಳಗೆ ದೇಶವನ್ನು ಬಹಿರಂಗ ಶೌಚ ಮುಕ್ತವನ್ನಾಗಿಸುವ ಗುರಿಸಾಧನೆಗಾಗಿ ಸರಕಾರವು ಘನತ್ಯಾಜ್ಯ ನಿರ್ವಹಣೆಗೆ ಗೋಬರ್-ಧನ್(ಗಾಲ್ವನೈಸಿಂಗ್ ಆರ್ಗ್ಯಾನಿಕ್ ಬಯೊ-ಆಗ್ರೋ ರಿಸೋರ್ಸ್‌ಸ್ ಧನ್) ಎಂಬ ನೂತನ ಯೋಜನೆಯನ್ನು ಮುಂಗಡಪತ್ರದಲ್ಲಿ ಪ್ರಸ್ತಾಪಿಸಿದೆ.
Next Story