ಮಂಗಳೂರು: ಕೋಸ್ಮೋಪೊಲಿಟನ್ ಕ್ಲಬ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು, ಫೆ. 1: ನಗರದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾದ ಕೋಸ್ಮೋ ಪೊಲಿಟನ್‌ನ ನೂತನ ಕಟ್ಟಡದ ಶಂಕುಸ್ಥಾಪನೆ ಗುರುವಾರ ನಡೆಯಿತು.
ಕ್ಲಬ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರು ಟಾಗೋರ್ ಪಾರ್ಕ್ ಬಳಿ ಇರುವ ಕ್ಲಬ್‌ನ ಜಮೀನಿನಲ್ಲಿ ಶಿಲಾನ್ಯಾಸ ನೆರವೇರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಮತ್ತು ರಾಜಗೋಪಾಲ್ ರೈ, ಕಾರ್ಯದರ್ಶಿ ಎಂ.ಸಿ.ಶೆಟ್ಟಿ, ಉಪ ಕಾರ್ಯದರ್ಶಿ ಕಾಮರಾಜ್ ರೈ, ಸದಸ್ಯರಾದ ಶಿವಶಂಕರ್ ರೈ, ಉದಯ ಶಂಕರ್ ರೈ, ಯೋಗೀಶ್ ಕುಮಾರ್, ಡಾ.ಭುಜಂಗ ಶೆಟ್ಟಿ, ರಘುರಾಮ್ ಶೆಟ್ಟಿ ಹಾಗೂ ಅರ್ಕಿಟೆಕ್ಟ್ ಪೀಟರ್ ಪೌಲ್, ಕಾಂಟ್ರಾಕ್ಟರ್ ದಿವಾಕರ್ ಶೇಷಕೃಷ್ಣ ಶೆಟ್ಟಿ ಮತ್ತು ಕ್ಲಬ್‌ನ ಸಿಬಂದಿ ಉಪಸ್ಥಿತರಿದ್ದರು.
Next Story





