ಹನೂರು: ಫೆ.06 ರಂದು 5ನೇ ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಹನೂರು,ಫೆ.01: ಹನೂರು ಪಟ್ಟಣದಲ್ಲಿ ಫೆ.06 ರಂದು ಮಂಗಳವಾರ 5ನೇ ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಗಡಿ ಭಾಗದಲ್ಲಿ ಕನ್ನಡದ ಕಂಪನ್ನು ಹರಡಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹನೂರು ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀನಿವಾಸ್‍ನಾಯ್ಡು ತಿಳಿಸಿದರು.
ಹನೂರು ಪಟ್ಟಣದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,
ಗಡಿ ಭಾಗದ ಜಿಲ್ಲೆಯ ನೂತನ ಹನೂರು ತಾಲೂಕಿನಲ್ಲಿ ಮಂಗಳವಾರಂದು ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಆರ್.ನರೇಂದ್ರ ಆಯ್ಕೆಮಾಡಲಾಗಿದೆ. ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ, ರಾಷ್ಟ್ರಧ್ವಜವನ್ನು ಕೊಳ್ಳೇಗಾಲ ತಹಶೀಲ್ದಾರ್ ಕಾಮಾಕ್ಷಮ್ಮ, ನಾಡದ್ವಜವನ್ನು ಕೊಳ್ಳೇಗಾಲ ಕಸಾಪ ಅಧ್ಯಕ್ಷ ಎಲ್.ನಂಜುಂಡಸ್ವಾಮಿ, ಪರಿಷತ್ತಿನ ಧ್ವಜವನ್ನು ಹನೂರು ಕಸಾಪ ಅಧ್ಯಕ್ಷ ಶ್ರಿನಿವಾಸ್‍ನಾಯ್ಡು ಆರೋಹಣಗೈಯ್ಯಲಿದ್ದಾರೆ ಎಂದರು.
ಬೆಳಿಗ್ಗೆ 8.30 ಗಂಟೆಗೆ ನಾಡಕಛೇರಿ ಆವರಣದಿಂದ ವಿವಿದ ಕಲಾತಂಡಗಳಿಗೆ ಕೊಳ್ಳೇಗಾಲ ತಾಲೂಕು ಪಂಚಾಯತ್ ಅಧ್ಯಕ್ಷ ರಾಜು ಚಾಲನೆ ನೀಡಲಿದ್ದು, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಗೊಂಬೆ ಕುಣಿತ, ರಂಗ ಕುಣಿತ, ಇನ್ನು ಮುಂತಾದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು. ಅತಿಥಿಗಳಾಗಿ ಉಪಾಧ್ಯಕ್ಷ ಲತಾರಾಜಣ್ಣ, ಉಪವಿಭಾಗಾಧಿಕಾರಿ ಪೌಜಿಯಾ ತರುನ್ನುಂ, ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರಕಾಶ್, ವಿಶೇಷ ತಹಶೀಲ್ದಾರ್ ಮಹದೇವಸ್ವಾಮಿ, ವೃತ್ತನಿರೀಕ್ಷಕ ಪರಶುರಾಮ್, ಮುಖ್ಯಾಧಿಕಾರಿ ಮೋಹನ್‍ಕೃಷ್ಣ, ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಫ್ರಾನ್ಸಿಸ್, ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಸಿದ್ದಪ್ಪ, ನಂಜುಂಡಸ್ವಾಮಿ, ಜಾನ್‍ಬ್ರಿಟ್ಟೋ ಕನ್ನಡಪರ ಹೋರಾಟಗಾರರು, ಕವಿಗಳು-ಕವಿಯತ್ರಿಗಳು, ಜನಪ್ರತಿನಿಧಿಗಳು, ಪಾಲ್ಗೂಳ್ಳಲಿದ್ದಾರೆ ಎಂದರು.
ಬೆಳಗ್ಗೆ10.30ಕ್ಕೆ ಕಾರ್ಯಕ್ರಮದ ಉದ್ಘಾಟನೆ, 12 ಗಂಟೆಗೆ ವಿಚಾರಗೋಷ್ಠಿ, 2 ಗಂಟೆಗೆ ಕವಿಗೋಷ್ಠಿ, 4 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಗೌರವ ಸನ್ಮಾನ ನಡೆಯಲಿದೆ. ಮತ್ತು ಸಂಜೆ 6 ಗಂಟೆಯ ನಂತರ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೊಳ್ಳೇಗಾಲ ಕಸಾಪ ಅಧ್ಯಕ್ಷ ನಂದೀಶ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಕ,ಸ,ಪಾ ಉಪಾದ್ಯಕ್ಷ ಅಶೋಕ್ ಪದಾದಿಕಾರಿಗಳಾ ಕೃಷ್ಣ ಹಾಜರಿದ್ದರು







