ಹೊಸ ಉದ್ಯೋಗಿಗಳಿಗೆ ಪಿಎಫ್ ಕೊಡುಗೆ!
ಕೇಂದ್ರ ಬಜೆಟ್-2018

ಹೊಸದಿಲ್ಲಿ, ಫೆ. 1: ಹೊಸದಾಗಿ ನೇಮಕಗೊಳ್ಳುವ ಉದ್ಯೋಗಿಗಳ ವೇತನದ 12 ಶೇಕಡದಷ್ಟನ್ನು ಮುಂದಿನ 3 ವರ್ಷಗಳ ಕಾಲ ಸರಕಾರ ಅವರ ಪರವಾಗಿ ಭವಿಷ್ಯ ನಿಧಿಗೆ ದೇಣಿಗೆ ನೀಡಲಿದೆ.
ಲೋಕಸಭೆಯಲ್ಲಿ ಗುರುವಾರ ಮಂಡಿಸಿದ 2018ರ ಬಜೆಟ್ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ವಿಷಯವನ್ನು ಪ್ರಕಟಿಸಿದರು.
ಅದೇ ವೇಳೆ, ಭವಿಷ್ಯ ನಿಧಿಗೆ ಮಹಿಳಾ ಉದ್ಯೋಗಿಗಳ ದೇಣಿಗೆಯನ್ನು ಪ್ರಸಕ್ತ 12 ಶೇ.ದಿಂದ 8 ಶೇ.ಕ್ಕೆ ಇಳಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಆದರೆ, ಉದ್ಯೋಗದಾತರ ದೇಣಿಗೆಯಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಹೀಗಾದರೆ, ಮಹಿಳಾ ಉದ್ಯೋಗಿಗಳು ಹೆಚ್ಚಿನ ಮೊತ್ತವನ್ನು ಮನೆಗೆ ಒಯ್ಯುತ್ತಾರೆ.
2017ರ ನವೆಂಬರ್ ವೇಳೆಗೆ, 18-25ರ ವಯೋಗುಂಪಿನ 36.8 ಲಕ್ಷ ನೂತನ ಸದಸ್ಯರು ಭವಿಷ್ಯನಿಧಿಗೆ ಸೇರ್ಪಡೆಗೊಂಡಿದ್ದಾರೆ.
Next Story