ಕೊಳ್ಳೇಗಾಲ: ನೂತನ ಓವರ್ ಹೆಡ್‍ಟ್ಯಾಂಕ್ ಗೆ ಶಾಸಕರಿಂದ ಚಾಲನೆ

ಕೊಳ್ಳೇಗಾಲ,ಫೆ.1: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಜಿ.ಪಂ ಟಿಎಸ್‍ಪಿ ಯೋಜನೆಯಡಿ ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಓವರ್ ಹೆಡ್‍ಟ್ಯಾಂಕ್ ಗೆ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರು ಚಾಲನೆ ನೀಡಿದರು.
ನಂತರ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಿಕ್ಕೆ ಬಂದ ನಂತರ ಹನೂರು ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ನೀಡಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಶಿವಮ್ಮ, ತಾ.ಪಂ ಅಧ್ಯಕ್ಷ ರಾಜು, ಜಿಲ್ಲಾ ಎಸ್‍ಟಿ ಕಾಂಗ್ರೆಸ್ ಅಧ್ಯಕ್ಷ ಪಾಳ್ಯಕೃಷ್ಣ, ಗ್ರಾ.ಪಂ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ಮಾದೇವಿ, ಜಿ.ಪಂ ಜ್ಯೂನಿಯರ್ ಇಂಜಿನಿಯರ್ ಪೂರ್ಣಿಮ, ಪಿಡಿಒ ಮರಿಸ್ವಾಮಿ ಹಾಗೂ ಎಲ್ಲಾ ಸದಸ್ಯರುಗಳು ಹಾಜರಿದ್ದರು.
Next Story





