ಸೂ ಕಿ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಯಾಂಗೋನ್, ಫೆ.1: ಮ್ಯಾನ್ಮಾರ್‌ನ ಪ್ರಮುಖ ನಾಯಕಿ ಆಂಗ್ ಸನ್ ಸೂ ಕಿ ಯವರ ಯಾಂಗೋನ್‌ನಲ್ಲಿರುವ ನಿವಾಸದ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ಎಸೆದ ಘಟನೆ ನಡೆದಿದೆ. ಸೂಕಿ ತಮ್ಮ ದೇಶದಲ್ಲಿ ವ್ಯಾಪಕ ಜನ ಬೆಂಬಲ ಹೊಂದಿದ್ದರೂ ರೊಹಿಂಗ್ಯಾ ವಿಷಯದಲ್ಲಿ ಆಕೆಯ ನಡೆ ಜಾಗತಿಕವಾಗಿ ಟೀಕೆಗೊಳಪಟ್ಟಿದೆ.
ಘಟನೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಆಘಾತ ವ್ಯಕ್ತಪಡಿಸಿರುವ ಆಕೆಯ ನ್ಯಾಶನಲ್ ಲೀಗ್ ಫೋರ್ ಡೆಮಾಕ್ರಸಿಯ ಸದಸ್ಯರಾದ ಕೀ ಟೊ, ದೇಶದ ಖ್ಯಾತ ನಾಯಕಿಯ ನಿವಾಸದ ಮೇಲೆ ದಾಳಿ ನಡೆದಿರುವುದು ಆಘಾತಕಾರಿಯಾಗಿದೆ. ಆದರೆ ಈ ದಾಳಿಯಿಂದ ಯಾರಿಗೂ ಯಾವ ರೀತಿಯ ಹಾನಿಯೂ ಸಂಭವಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸರಕಾರಿ ವಕ್ತಾರರಾದ ಝಾವ್ ತೇ, ದಾಳಿಯನ್ನು ದೃಢಪಡಿಸಿದ್ದು ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಗುಲಾಬಿ ಬಣ್ಣದ ಟಿ-ಶರ್ಟ್ ಹಾಗೂ ನೀಲಿ ಬಣ್ಣದ ಲುಂಗಿ ಧರಿಸಿರುವ ಆರೋಪಿ ಭಾವಚಿತ್ರವನ್ನು ಅವರು ತಮ್ಮ ಪೇಸ್‌ಬುಕ್‌ನಲ್ಲಿ ಹಾಕಿದ್ದಾರೆ.
Next Story





