ಫೆ.4: ಅಂಜುಮನ್ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಭಟ್ಕಳ, ಫೆ. 1: ಇಲ್ಲಿನ ಅಂಜುಮಾನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಫೆ. 4ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಚಾರ ಸಂಕಿರಣದಲ್ಲಿ ಎಂಟರ್‌ಪ್ರನುರಿಯಲ್ ಇನ್ನೋವೇಶನ್ ಆ್ಯಂಡ್ ಟಾಕ್ಸೇಶನ್ ರೀಸೆಂಟ್ ಟ್ರಂಡ್ಸ್ ಇನ್ ಇಂಡಿಯನ್ ಬ್ಯುಸಿನೆಸ್ ಸಿನಾರಿಯೋ ಎನ್ನುವ ವಿಷಯದ ಕುರಿತು ಮಂಗಳೂರಿನ ಲೆಕ್ಕ ಪರಿಶೋಧಕರಾದ ನಂದಗೋಪಾಲ ಶೆಣೈ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರು ಮತ್ತು ಉಡುಪಿ ವಲಯದ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ಧಪ್ಪಾಜಿ ಆರ್. ಎನ್., ಹೈದರಾಬಾದ್ ಮೌಲಾನಾ ಆಝಾದ್ ನ್ಯಾಶನಲ್ ಉರ್ದು ವಿಶ್ವವಿದ್ಯಾಲಯದ ಡಾ. ಎನ್. ಆಯ್. ಮುಲ್ಲಾ, ಕಾರವಾರದ ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ರಮಾನಂದ ನಾಯಕ, ಕುಮಟಾದ ಎಸ್.ಜಿ.ಎಸ್.ಟಿ. ಸಹಾಯಕ ಆಯುಕ್ತ ಭರತೇಶ ಕುಮಾರ್, ಆಯ್.ಟಿ.ಒ. ನಂದನ ಐಗಳ್ ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಕೊಲ್ಲಾಪುರದ ಎಸ್.ಆಯ್.ಬಿ.ಇ.ಆರ್. ನಿರ್ದೇಶಕ ಡಾ. ಎಂ. ಎಂ. ಅಲಿ, ಧಾರವಾಡದ ಜೆ.ಎಸ್.ಎಸ್.ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೌಕತ್ ಅಲಿ ಎಂ. ಮಗಲಮನಿ, ಮುಂಬೈ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಎಲ್. ಎಂ. ದಾನಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮಾನ್ ಅಧ್ಯಕ್ಷ ಅಬ್ದುಲ್ ರಹೀಂ ಜುಕಾಕೋ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





