ಥಿಯೇಟರ್ನಲ್ಲಿ ಸ್ನೇಹಿತೆಯ ಅತ್ಯಾಚಾರ: ಆರೋಪಿ ಬಂಧನ
ಹೈದರಾಬಾದ್, ಫೆ. 2: ಸ್ನೇಹಿತೆಯನ್ನು ಸಿನಿಮಾಗೆ ಕರೆದೊಯ್ದು ಸಿನಿಮಾ ಹಾಲ್ನಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಿಕಂದರಾಬಾದ್ನಲ್ಲಿ ನಡೆದಿದೆ.
ಜೆಸಿಬಿ ಚಾಲಕನಾಗಿದ್ದ ಕಂದಕಟ್ಲಾ ಬಿಕ್ಷಾಪತಿ (23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಎರಡು ತಿಂಗಳ ಹಿಂದೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಆರೋಪಿ, 19 ವರ್ಷದ ಇಂಟರ್ಮೀಡಿಯೇಟ್ ವಿದ್ಯಾರ್ಥಿನಿಯ ಮೇಲೆ ಥಿಯೇಟರ್ನಲ್ಲೇ ಲೈಂಗಿಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಪಾಲಕರ ಜತೆ ಠಾಣೆಗೆ ಆಗಮಿಸಿದ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಪ್ರಕರಣ ಜನವರಿ 29ರಂದು ನಡೆದಿದ್ದು, ಪದ್ಮಾವತ್ ಚಿತ್ರ ವೀಕ್ಷಿಸಲು ಥಿಯೇಟರ್ಗೆ ತೆರಳಿದ್ದರು. ವಿದ್ಯಾರ್ಥಿನಿ ಚಿತ್ರ ನೋಡುತ್ತಿದ್ದಾಗ, ಆರೋಪಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಎನ್ನಲಾಗಿದೆ. ಯುವತಿ ಮನೆಗೆ ಬಂದು ಘಟನೆಯನ್ನು ಪೋಷಕರಿಗೆ ವಿವರಿಸಿದಳು. ಬಳಿಕ ಪೋಷಕರು ಹಾಗೂ ಯುವತಿ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
Next Story