ಶಾಲಾ ಬಾಲಕನ ಹತ್ಯೆ: ಮೂವರು ಬಾಲಕರ ಸೆರೆ

ಹೊಸದಿಲ್ಲಿ, ಫೆ.2: ಖಾಸಗಿ ಶಾಲೆಯ ಶೌಚಾಲಯದ ಒಳಗೆ ಸಹಪಾಠಿಯೊಬ್ಬನನ್ನು ಹೊಡೆದು ಸಾಯಿಸಿದ ಘಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಶುಕ್ರವಾರ ಮೂವರು ಶಾಲಾ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ದಿಲ್ಲಿಯ ಕರವಾಲ್ ನಗರದಲ್ಲಿ ಗುರುವಾರ ಬೆಳಗ್ಗೆ ಈ ಅಹಿತಕರ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊಲೆ ಆರೋಪಿಗಳು ಸುಮಾರು 15ವರ್ಷ ವಯಸ್ಸಿನವರಾಗಿದ್ದು ತುಷಾರ್ ಕುಮಾರ್ ಎಂಬ 14ರ ಹರೆಯದ ಬಾಲಕನನ್ನು ಹತ್ಯೆ ಗೈದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. 9ನೇ ತರಗತಿಯಲ್ಲಿ ಓದುತ್ತಿರುವ ತುಷಾರ್ ಮೃತದೇಹ ಜೀವನ್ಜ್ಯೋತಿ ಸೀನಿಯರ್ ಸೆಕೆಂಡರಿ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು.
ವಿಚಾರಣೆಯ ವೇಳೆ ತುಷಾರ್ಗೆ ಮೂವರು ಸಹಪಾಠಿಗಳು ಶೌಚಾಲಯದೊಳಗೆ ಹೊಡೆದಿರುವುದು ಗೊತ್ತಾಗಿದೆ.ಗುರುವಾರ ಬೆಳಗ್ಗೆ ಇವರ ನಡುವೆ ವಾಗ್ವಾದ ನಡೆದಿತ್ತು. ತುಷಾರ್ರನ್ನು ಹಿಂಬಾಲಿಸಿಕೊಂಡು ಹೋದ ಮೂವರು ವಿದ್ಯಾರ್ಥಿಗಳು ಶೌಚಾಲಯದೊಳಗೆ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story