Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ನಾಳೆ ಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯ...

ನಾಳೆ ಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯ ಹೋರಾಟ

ಐಸಿಸಿ ಅಂಡರ್-19 ವಿಶ್ವಕಪ್‌

ವಾರ್ತಾಭಾರತಿವಾರ್ತಾಭಾರತಿ2 Feb 2018 11:29 PM IST
share
ನಾಳೆ ಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯ ಹೋರಾಟ

ಹ್ಯಾಮಿಲ್ಟನ್, ಫೆ.2: ಮುಂಬೈನ ಪ್ರತಿಭಾವಂತ ಆಟಗಾರ ಪೃಥ್ವಿ ಶಾ ನಾಯಕತ್ವ ಹಾಗೂ ರಾಹುಲ್ ದ್ರಾವಿಡ್‌ರ ದಕ್ಷ ಮಾರ್ಗದರ್ಶನದಲ್ಲಿ ಭಾರತ ತಂಡ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದು, ಶನಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

ಭಾರತ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬ್ಯಾಟಿಂಗ್‌ನಲ್ಲಿ ಶುಭ್‌ಮನ್ ಗಿಲ್(341 ರನ್) ಹಾಗೂ ಪೃಥ್ವಿ ಶಾ(232 ರನ್ ) ಮಿಂಚಿದ್ದರೆ, ಬೌಲಿಂಗ್‌ನಲ್ಲಿ ಅನುಕೂಲ್ ರಾಯ್(12 ವಿಕೆಟ್), ಶಿವ ಮಾವಿ(8) ಹಾಗೂ ಕಮಲೇಶ್ ನಾಗರಕೋಟಿ(7) ಮಿಂಚಿದ್ದಾರೆ.

2010ರಲ್ಲಿ ಮಿಚೆಲ್ ಮಾರ್ಷ್ ನೇತೃತ್ವದಲ್ಲಿ ಕೊನೆಯ ಬಾರಿ ಅಂಡರ್-19 ವಿಶ್ವಕಪ್‌ನ್ನು ಜಯಿಸಿರುವ 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ 4ನೇ ಬಾರಿ ಪ್ರಶಸ್ತಿ ಜಯಿಸಿ ಟೂರ್ನಿಯ ಯಶಸ್ವಿ ತಂಡ ಎನಿಸಿಕೊಳ್ಳುವ ವಿಶ್ವಾಸದಲ್ಲಿದೆ. ಭಾರತ 2012ರಲ್ಲಿ ಉನ್ಮುಕ್ತ್ ಚಂದ್ ನಾಯಕತ್ವದಲ್ಲಿ ಆಸ್ಟ್ರೇಲಿಯವನ್ನು ಮಣಿಸಿ ಕೊನೆಯ ಬಾರಿ ಕಿರಿಯರ ವಿಶ್ವಕಪ್‌ನ್ನು ಜಯಿಸಿತ್ತು. ಈ ಮೂಲಕ ಮೂರನೇ ಬಾರಿ ಪ್ರಶಸ್ತಿ ಜಯಿಸಿ ಆಸ್ಟ್ರೇಲಿಯದ ಗರಿಷ್ಠ ಪ್ರಶಸ್ತಿ(3)ದಾಖಲೆಯನ್ನು ಸರಿಗಟ್ಟಿತ್ತು. ಇದೀಗ ಹೊಸ ದಾಖಲೆ ನಿರ್ಮಿಸಲು ಎದುರು ನೋಡುತ್ತಿದೆ.

    2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿಶ್ವಕಪ್ ಫೈನಲ್‌ಗೆ ತಲುಪಿದ್ದ ಭಾರತ ತಂಡ ವೆಸ್ಟ್‌ಇಂಡೀಸ್‌ನ ವಿರುದ್ಧ ಸೋಲುಂಡಿತ್ತು. ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಉಭಯ ತಂಡಗಳು ಈತನಕ ತಲಾ 3 ಬಾರಿ ವಿಶ್ವಕಪ್‌ನ್ನು ಜಯಿಸಿವೆ. ಎರಡೂ ತಂಡಗಳ ಸಹಾಯಕ ಸಿಬ್ಬಂದಿ ತಂಡದ ಗೆಲುವಿಗಾಗಿ ಉತ್ತಮ ರಣನೀತಿ ರಚಿಸಿದ್ದಾರೆ. ಆಸ್ಟ್ರೇಲಿಯ ತಂಡದಲ್ಲಿ ಕ್ರಿಸ್ ರೋಜರ್ಸ್ ಹಾಗೂ ರಿಯಾನ್ ಹ್ಯಾರಿಸ್ ಅವರಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ‘ಮಹಾಗೋಡೆ’ಖ್ಯಾತಿಯ ರಾಹುಲ್ ದ್ರಾವಿಡ್ ಉತ್ತಮ ಕೋಚಿಂಗ್ ನೀಡುತ್ತಿದ್ದಾರೆ. ಇಬ್ಬರೂ ನಾಯಕರಾದ ಜೇಸನ್ ಸಂಘಾ ಹಾಗೂ ಪೃಥ್ವಿ ಶಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಆರಂಭಿಕ ಆಟಗಾರರಾದ ಶಾ ಹಾಗೂ ಮನ್ಜೋತ್ ಕಾಲ್ರಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಂಡದಲ್ಲಿ ಇಬ್ಬರು ಆಲ್‌ರೌಂಡರ್‌ಗಳಾದ ಅನುಕೂಲ್ ರಾಯ್ ಹಾಗೂ ಕಮಲೇಶ್ ನಾಗರಕೋಟಿ ಅವರಿದ್ದಾರೆ. ಇಶಾನ್ ಪೊರೆಲ್ ಹೊರತುಪಡಿಸಿ ಯಾವ ಆಟಗಾರನೂ ಗಾಯದ ಸಮಸ್ಯೆ ಎದುರಿಸುತ್ತಿಲ್ಲ. ಕೋಚ್ ರಾಹುಲ್ ದ್ರಾವಿಡ್‌ರಿಂದ ಶ್ಲಾಘನೆಗೆ ಒಳಗಾಗಿರುವ 16ರ ಹರೆಯದ ರಿಯಾನ್ ಪರಾಗ್ ಕೈಬೆರಳಿನ ಗಾಯದಿಂದಾಗಿ ಟೂರ್ನಿಯ ಆರಂಭದಲ್ಲಿ ಆಡಿರಲಿಲ್ಲ. ಝಿಂಬಾಬ್ವೆ ವಿರುದ್ಧ ಅಂತಿಮ ಗ್ರೂಪ್ ಪಂದ್ಯದಲ್ಲಿ ಆಡಿದ್ದರು. ಆಸ್ಟ್ರೇಲಿಯ ತಂಡದಲ್ಲಿ ಜಾಕ್ ಎಡ್ವಡ್ಸ್‌ರ್  ಸ್ಪಿನ್ ಬೌಲರ್‌ಗಳೆದುರು ಆಡಬಲ್ಲ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದು, ಭಾರತ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ 73 ರನ್ ಗಳಿಸಿದ್ದರು. ಅಫ್ಘಾನಿಸ್ತಾನದ ವಿರುದ್ಧ 72 ರನ್ ಗಳಿಸಿದ್ದರು.

ತಂಡದ ಸಮಾಚಾರ

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದರೂ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಪರಾಗ್ ಇನ್ನಷ್ಟೇ ತನ್ನ ಸಾಮರ್ಥ್ಯ ಹೊರಹಾಕಬೇಕಾಗಿದೆ. ಹಾರ್ವಿಕ್ ದೇಸಾಯಿ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮಾತ್ರ ಅರ್ಧಶತಕ ದಾಖಲಿಸಿದ್ದಾರೆ. ಪಪುವಾ ನ್ಯೂಗಿನಿ ವಿರುದ್ಧ ಆರಂಭಿಕ ಆಟಗಾರ ನಾಗಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯದ ನಥಾನ್ ಮೆಕ್‌ಸ್ವೀನಿ 156 ರನ್ ಗಳಿಸಿ ಗಮನ ಸೆಳೆದಿದ್ದರು. ಆರಂಭಿಕ ಆಟಗಾರ ಮ್ಯಾಕ್ಸ್ ಬ್ರುಯಂಟ್ 5 ಇನಿಂಗ್ಸ್‌ಗಳಲ್ಲಿ ಕೇವಲ 93 ರನ್ ಗಳಿಸಿದ್ದಾರೆ.

ಪಿಚ್ ಹಾಗೂ ವಾತಾವರಣ

ಫೈನಲ್ ಪಂದ್ಯ ನಡೆಯಲಿರುವ ವೌಂಟ್ ಮಾಂಗನ್ಯುಯಿಯಲ್ಲಿ ಮೋಡಕವಿದ ವಾತಾವರಣವಿದ್ದು, ಕಳೆದ ಎರಡು ದಿನಗಳಿಂದ ಪಿಚ್ ಮೇಲೆ ಹೊದಿಕೆ ಹಾಸಲಾಗಿದೆ. ಬೇ ಓವಲ್ ಮೈದಾನದಲ್ಲಿ ಈ ಹಿಂದೆ ಹಲವು ದೊಡ್ಡ ಸ್ಕೋರ್‌ನ ಪಂದ್ಯಗಳು ನಡೆದಿವೆ. ಮೂರು ವಾರಗಳ ಹಿಂದೆ ಉಭಯ ತಂಡಗಳು ಈ ಮೈದಾನದಲ್ಲಿ ಉದ್ಘಾಟನಾ ಪಂದ್ಯ ಆಡಿದಾಗ ಭಾರತ 328 ರನ್ ಗಳಿಸಿತ್ತು. ಶನಿವಾರವೂ ರನ್‌ಹೊಳೆ ಹರಿಯುವ ಸಾಧ್ಯತೆಯಿದೆ.

ಹೈಲೈಟ್ಸ್

►ಟೂರ್ನಮೆಂಟ್‌ನ ಅಗ್ರ-10 ಸ್ಕೋರರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳು ಸ್ಥಾನ ಪಡೆದಿಲ್ಲ.

►ಶುಭ್‌ಮನ್ ಗಿಲ್ ಟೂರ್ನಮೆಂಟ್‌ನಲ್ಲಿ ಶತಕ ದಾಖಲಿಸಿರುವ ಭಾರತದ ಏಕೈಕ ಬ್ಯಾಟ್ಸ್‌ಮನ್. ಯೂತ್ ಏಕದಿನದಲ್ಲಿ ಸತತ ಆರು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಸಾಧನೆಯೊಂದಿಗೆ ಫೈನಲ್ ಪಂದ್ಯ ಆಡಲಿದ್ದಾರೆ.

►35 ರನ್‌ಗೆ 8 ವಿಕೆಟ್‌ಗಳನ್ನು ಉರುಳಿಸಿರುವ ಆಸ್ಟ್ರೇಲಿಯದ ಸ್ಪಿನ್ನರ್ ಲಾಯ್ಡಿ ಪೋಪ್ ಟೂರ್ನಿಯ ಇತಿಹಾಸದಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ್ದಾರೆ.

ಭಾರತ(ಸಂಭಾವ್ಯ)

ಪೃಥ್ವಿ ಶಾ(ನಾಯಕ), ಮನ್ಜೋತ್ ಕಾಲ್ರ, ಶುಭ್‌ಮನ್ ಗಿಲ್, ಹಾರ್ವಿಕ್ ದೇಸಾಯಿ, ರಿಯಾನ್ ಪರಾಗ್, ಅಭಿಷೇಕ್ ಶರ್ಮ, ಅನುಕೂಲ್ ರಾಯ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಇಶಾನ್ ಪೊರೆಲ್, ಶಿವ ಸಿಂಗ್.

ಆಸ್ಟ್ರೇಲಿಯ(ಸಂಭಾವ್ಯ)

ಜಾಕ್ ಎಡ್ವರ್ಡ್ಸ್, ಮ್ಯಾಕ್ಸ್ ಬ್ರಿಯಾಂಟ್, ಜೇಸನ್ ಸಂಘಾ(ನಾಯಕ), ಪರಮ್ ಉಪ್ಪಲ್, ನಥಾನ್ ಮೆಕ್‌ಸ್ವೀನಿ, ಜೋನಾಥನ್ ಮೆರ್ಲೊ, ವಿಲ್ ಸದರ್ಲೆಂಡ್, ಬಾಕ್ಸ್ಟರ್ ಹೋಲ್ಟ್, ಝಾಕ್ ಎವನ್ಸ್, ರಿಯಾನ್ ಹ್ಯಾಡ್ಲಿ, ಲಾಯ್ಡಿ ಪೋಪ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X