ವೋಝ್ನಿಯಾಕಿ ಕ್ವಾರ್ಟರ್ ಫೈನಲ್‌ಗೆ
ಸೈಂಟ್ ಪೀಟರ್ಸ್ ಬರ್ಗ್ ಟ್ರೋಫಿ
.jpg)
ಪೀಟರ್ಸ್‌ಬರ್ಗ್, ಫೆ.2: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ವಿಶ್ವದ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಸೈಂಟ್ ಪೀಟರ್ಸ್‌ಬರ್ಗ್ ಟ್ರೋಫಿ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
27ರ ಹರೆಯದ ಡೆನ್ಮಾರ್ಕ್ ಆಟಗಾರ್ತಿ ವೋಝ್ನಿಯಾಕಿ ರಶ್ಯದ ಯುವ ಆಟಗಾರ್ತಿ ಅನಸ್ತೇಸಿಯ ಪೊಟಾಪೊವಾರನ್ನು 6-0, 6-1 ಸೆಟ್‌ಗಳಿಂದ ಮಣಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ರಶ್ಯದ ಇನ್ನೋರ್ವ ಯುವ ಆಟಗಾರ್ತಿ ಡರಿಯಾ ಕಾಸಟ್‌ಕಿನಾರನ್ನು ಎದುರಿಸಲಿದ್ದಾರೆ. ಐದನೇ ಶ್ರೇಯಾಂಕದ ಜುಲಿಯಾ ಜಾರ್ಜಸ್ ಇಟಲಿಯ ರೊಬರ್ಟ ವಿನ್ಸಿ ಅವರನ್ನು 7-5, 6-0 ಅಂತರದಿಂದ ಮಣಿಸುವ ಮೂಲಕ ಅಂತಿಮ 8ರ ಘಟ್ಟವನ್ನು ತಲುಪಿದ್ದಾರೆ. ಜರ್ಮನಿ ಆಟಗಾರ್ತಿ ಜಾರ್ಜಸ್ ಮುಂದಿನ ಸುತ್ತಿನಲ್ಲಿ 18ರ ಹರೆಯದ ರಶ್ಯದ ಕ್ವಾಲಿಫೈಯರ್ ಎಲೆನಾ ರಿಬಾಕಿನಾರನ್ನು ಎದುರಿಸಲಿದ್ದಾರೆ.
Next Story





