ಫೆ.4: ಮಲ್ಲಾರಿನಲ್ಲಿ ಧಾರ್ಮಿಕ, ಸೌಹಾರ್ದ ಕಾರ್ಯಕ್ರಮ
ಕಾಪು, ಫೆ. 3: : ಸಾದಾತ್ ವಲೀ ಝಿಕ್ರ್ ಮಜ್ಲಿಸ್ ಕೆರೆಕಾಡು ಮುಲ್ಕಿ ಇದರ ಅಧೀನದಲ್ಲಿ ಮಲ್ಲಾರಿನ ಕೋಟೆಯಲ್ಲಿ ಕಾರ್ಯಾಚರಿಸುತ್ತಿರುವ ಹಝ್ರತ್ ಸಾದಾತ್ ವೃದ್ಧಾಶ್ರಮದ ಪ್ರಥಮ ವಾರ್ಷಿಕದ ಪ್ರಯುಕ್ತ ಒಂದು ದಿನದ ಧಾರ್ಮಿಕ ಕಾರ್ಯಕ್ರಮ ಫೆ.4ರಂದು ನಡೆಯಲಿದೆ.
ಅಂದು ಸಂಜೆ 4ಗಂಟೆಗೆ ಶಾಝೂಲಿ ರಾತೀಬ್ ನಡೆಯಲಿದ್ದು, ಸಯ್ಯದ್ ಯಹ್ಯಲ್ ಬುಖಾರಿ ತಂಙಳ್ ಮಡವೂರು ಕೋಟೆ ನೇತೃತ್ವ ವಹಿಸಲಿದ್ದಾರೆ. 7 ಗಂಟೆಗೆ ಮಜ್ಲಿಸುನ್ನೂರು ಆಧ್ಯಾತ್ಮಿಕ ಸಂಗಮ ನಡೆಯಲಿದ್ದು, ರಾತ್ರಿ 8ಗಂಟೆಗೆ ಸೌಹಾರ್ದ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಬಳಿಕ ನಅತೆ ಶರೀಫ್ ಹಾಗೂ ಕವಾಲಿ ಕಾರ್ಯ ಕ್ರಮ ನಡೆಯಲಿದೆ. ಅನ್ವರ್ ಆಲೀ ಷಾ ಕವಾಲಿ ನೇತೃತ್ವ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





