ಫೆ.10ರಿಂದ ಕಟಪಾಡಿಯಲ್ಲಿ ಕಾಲೇಜು ರಂಗೋತ್ಸವ
ಉಡುಪಿ, ಫೆ.3: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ರಂಗಾಯಣ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ.10 ಮತ್ತು 11ರಂದು ಕಾಲೇಜು ರಂಗೋತ್ಸವ ನಡೆಯಲಿದೆ.
ಕಾರ್ಯಕ್ರಮವು ಕಟಪಾಡಿಯ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿ ನಲ್ಲಿ ನಡೆಯಲಿದ್ದು, ಫೆ.11ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂ ನಡೆಯಲಿದೆ. ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಖ್ಯಾತಿಯ ನಟ ಹಾಗೂ ನಿರ್ದೇಶಕ ರಾಜ್ ಬಿ.ಶೆಟ್ಟಿ ರಂಗೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಫೆ.10ರಂದು ಅಪರಾಹ್ನ 2 ರಿಂದ ಜಾನಪದ ನೃತ್ಯ ಸ್ಪರ್ಧೆ ಹಾಗೂ 11 ರಂದು ಬೆಳಗ್ಗೆ 9:00ರಿಂದ ನಾಟಕ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





