ಚಿಕ್ಕಮಗಳೂರು: ಎರಡು ಗುಂಪಿನ ನಡುವೆ ಗಲಾಟೆ; ಇಬ್ಬರಿಗೆ ಗಾಯ

ಚಿಕ್ಕಮಗಳೂರು, ಫೆ.3: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಇಬ್ಬರಿಗೆ ತೀವ್ರ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದಿದೆ.
ಗಲಾಟೆಯಲ್ಲಿ ಜೋಹರ್ ಎಂಬಾತನ ಗುಂಪಿನವರು ಕದೀರ್ ಮತ್ತು ಝುಬೇರ್ ಮೇಲೆ ಚಾಕು ಇರಿತ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಝುಬೇರ್ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕದೀರ್‍ಗೆ ಮಲ್ಲೇಗೌಡ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಜೋಹರ್ ಮತ್ತು ಕದೀರ್‍ವುಲ್ಲಾ ತಂಡಗಳ ನಡುವೆ ಶುಕ್ರವಾರ ರಾತ್ರಿ ಗ್ಯಾಂಗ್ ವಾರ್ ನಡೆದಿದ್ದು, ಎರಡೂ ಗ್ಯಾಂಗ್‍ಗಳು ಕೂಡ ದೊಣ್ಣೆ, ಚಾಕುವಿನಿಂದ ಪರಸ್ಪರ ಬಡಿದಾಟ ನಡೆಸಿದ್ದಾರೆ. ಘಟನೆಯು ನಗರದ ನೂರಾನಿ ಮಸೀದಿ ಬಳಿ ನಡೆದಿದ್ದು, ಪೊಲಿಸರು ಇಬ್ಬರನ್ನೂ ಬಂಧಿಸಿದ್ದಾರೆ.
ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





