ಫೆ. 10: ಬ್ರಹ್ಮಾವರದಲ್ಲಿ ಜಿಲ್ಲಾ ದೇಹದಾರ್ಢ್ಯ ಸ್ಪರ್ಧೆ
ಉಡುಪಿ, ಫೆ.3: ಉಡುಪಿ ಜಿಲ್ಲಾ ದೇಹದಾರ್ಢ್ಯಪಟುಗಳ ಸಂಘದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ‘ಮಿ.ಉಡುಪಿ’ ಇದೇ ಫೆ.10ರಂದು ಸಂಜೆ 5:00ಕ್ಕೆ ಬ್ರಹ್ಮಾವರದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಸ್ಪರ್ಧಾಳುಗಳ ದೇಹ ತೂಕದ ಪರಿಶೀಲನೆ ಅಪರಾಹ್ನ 2 ರಿಂದ 4 ರ ವರೆಗೆ ನಡೆಯಲಿದೆ. ಸ್ಪರ್ಧೆ ದೇಹತೂಕಾನುಸಾರ ಒಟ್ಟು 7 ವಿಭಾಗಗಳಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಅತ್ಯುತ್ತಮ ದೇಹದಾರ್ಢ್ಯ ಪಟು ವಿಜೇತರು ‘ಮಿ. ಉಡುಪಿ-2018’ ಪ್ರಶಸ್ತಿಯೊಂದಿಗೆ 15,000 ರೂ. ನಗದು ಬಹುಮಾನ ಪಡೆಯಲಿದ್ದಾರೆ. ಮೊದಲ ಐದು ಸ್ಥಾನಿಗಳಿಗೆ ನಗದು ಪುರಸ್ಕಾರ ದೊರೆಯಲಿದೆ.
ಉಡುಪಿ ಜಿಲ್ಲೆಯ ಜಿಮ್‌ಗಳ ಉದಯೋನ್ಮುಖ ದೇಹದಾರ್ಢ್ಯ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ದೇಹದಾರ್ಢ್ಯ ಪಟುಗಳ ಸಂಘದ ಅಧ್ಯಕ್ಷ ಮಿಲಿಂದ್ ಸಾಲ್ಯಾನ್ ಉಡುಪಿ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





