ಬಣಕಲ್: ಭತ್ತದ ಹುಲ್ಲು ಸಾಗಿಸುತ್ತಿದ್ದ ಪಿಕ್ ಅಪ್ ವಾಹನಕ್ಕೆ ಬೆಂಕಿ
![ಬಣಕಲ್: ಭತ್ತದ ಹುಲ್ಲು ಸಾಗಿಸುತ್ತಿದ್ದ ಪಿಕ್ ಅಪ್ ವಾಹನಕ್ಕೆ ಬೆಂಕಿ ಬಣಕಲ್: ಭತ್ತದ ಹುಲ್ಲು ಸಾಗಿಸುತ್ತಿದ್ದ ಪಿಕ್ ಅಪ್ ವಾಹನಕ್ಕೆ ಬೆಂಕಿ](https://www.varthabharati.in/sites/default/files/images/articles/2018/02/3/batthada hullige benki (suddi kalisiddene).png)
ಬಣಕಲ್, ಫೆ.3: ಭತ್ತದ ಹುಲ್ಲು ಕೊಂಡೊಯ್ಯುವ ವೇಳೆ ವಿದ್ಯುತ್ ತಂತಿ ತಗುಲಿ ಪಿಕ್ ಅಪ್ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಪಿಕ್ ಅಪ್ ವಾಹನದಲ್ಲಿ ಮೂಡಿಗೆರೆಯಿಂದ ಮಂಗಳೂರಿಗೆ ಭತ್ತದ ಹುಲ್ಲು ಕೊಂಡೊಯ್ಯುವ ವೇಳೆ ಈ ಘಟನೆ ನಡೆದಿದೆ. ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ವಾಹನವನ್ನು ಹಳ್ಳದೆಡೆಗೆ ಸಾಗಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾನೆ.
ಬೆಂಕಿಯಿಂದಾಗಿ ಪಿಕ್ ಅಪ್ ವಾಹನಕ್ಕೆ ಹಾನಿಯಾಗಿದ್ದು, ಭತ್ತದ ಹುಲ್ಲು ಸಂಪೂರ್ಣ ನಾಶವಾಗಿದೆ ಎಂದು ತಿಳಿದು ಬಂದಿದೆ.
Next Story