ನಾಗಾಲ್ಯಾಂಡ್: ಎನ್ ಪಿಎಫ್ ಜೊತೆ ಮೈತ್ರಿ ಮುರಿದ ಬಿಜೆಪಿ

ಹೊಸದಿಲ್ಲಿ, ಫೆ.3: ನಾಗಾಲ್ಯಾಂಡ್ ನ ಅಸೆಂಬ್ಲಿ ಚುನಾವಣೆಗಾಗಿ ಬಿಜೆಪಿ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕೇಂದ್ರ ಸಚಿವ ಹಾಗು ಬಿಜೆಪಿ ನಾಯಕ ಕಿರಣ್ ರಿಜಿಜು 15 ವರ್ಷಗಳ ನಂತರ ನಾಗಾ ಪೀಪಲ್ಸ್ ಫ್ರಂಟ್ ಜೊತೆಗೆ (ಎನ್ ಪಿಎಫ್) ಬಿಜೆಪಿ ಮೈತ್ರಿ ಕಡಿದುಕೊಳ್ಳುವುದಾಗಿ ಘೋಷಿಸಿದ ಗಂಟೆಗಳ ನಂತರ ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಬಿಜೆಪಿ ಇದೀಗ ನ್ಯಾಶನಲ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ (ಎನ್ ಡಿಪಿಪಿ) ಜೊತೆ ಕೈಜೋಡಿಸಿದೆ.
“ನಾವು ಎನ್ ಪಿಎಫ್ ಜೊತೆ ಮೈತ್ರಿ ಉಳಿಸಿಕೊಳ್ಳಲು ಯತ್ನಿಸಿದೆವು. ಆದರೆ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ಎನ್ ಡಿಪಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ನಾಗಾಲ್ಯಾಂಡ್ ನಲ್ಲಿ ಎನ್ ಡಿಪಿಪಿ ಹಾಗು ಬಿಜೆಪಿ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ನಂಬಿಕೆ ನಮಗಿದೆ” ಎಂದು ಕಿರಣ್ ರಿಜಿಜು ಹೇಳಿದ್ದಾರೆ.
Next Story





