ಬಂಟ್ವಾಳ: ಸಬ್‌ಇನ್ಪೆಕ್ಟರ್ ಆಗಿ ಮುಹಮ್ಮದ್ ಮುಂಬಡ್ತಿ

ಬಂಟ್ವಾಳ, ಫೆ. 3: ಸುಳ್ಯ ಪೊಲೀಸ್ ಠಾಣೆಯಲ್ಲಿ ಎಎಸ್ಸೈಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ. ಮುಹಮ್ಮದ್ ಅವರು ಎಸ್ಸೈಯಾಗಿ ಮುಂಬಡ್ತಿಗೊಂಡು ಮಂಗಳೂರಿನ ಡಿಸಿಆರ್‌ಇಗೆ ವರ್ಗಾವಣೆಗೊಂಡಿರುತ್ತಾರೆ.
ಬಂಟ್ವಾಳ ತಾಲೂಕು ನಾವೂರು ಗ್ರಾಮದ ಸುಲ್ತಾನ್ ನಗರ ನಿವಾಸಿಯಾದ ಎಸ್ಸೈ ಮುಹಮ್ಮದ್ ಅವರು, 1981ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಕೊಂಡಿದ್ದರು.
ಕುಂದಾಪುರ, ಮಂಗಳೂರು ಸಂಚಾರಿ ಪೊಲೀಸ್ ಠಾಣೆ, ಕಾರ್ಕಳ, ಮೂಡಬಿದಿರೆ, ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಪುತ್ತೂರು ಸಂಚಾರಿ ಠಾಣೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸುಳ್ಯ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸುಮಾರು 36 ವರ್ಷ 7 ತಿಂಗಳುಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಇದೀಗ ಮುಂಬಡ್ತಿ ಪಡೆದು ಮಂಗಳೂರು ಡಿಸಿಆರ್‌ಇಗೆ ವರ್ಗಾವಣೆ ಗೊಂಡಿರುತ್ತಾರೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
Next Story





