ತೊಗರಿ ಬೆಳಗಾರರ ನೋಂದಣಿ ಅವಧಿ ವಿಸ್ತರಿಸಿ: ಮಾರುತಿ ಮಾನ್ಪಡೆ
ಬೆಂಗಳೂರು, ಫೆ.3: ರಾಜ್ಯ ಸರಕಾರ ತೊಗರಿ ಬೆಳೆ ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟಕ್ಕಾಗಿ ಬೆಳೆಗಾರರ ನೋಂದಣಿಯನ್ನು 1ತಿಂಗಳು ವಿಸ್ತರಿಸಬೇಕು ಎಂದು ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮನವಿ ಮಾಡಿದರು.
ಕೇಂದ್ರ ಕೇವಲ 1.65 ಲಕ್ಷ ಟನ್ ತೊಗರಿ ಖರೀದಿಗೆ ಪರವಾನಗಿ ನೀಡಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದ್ದು, 5ಲಕ್ಷ ಟನ್ ತೊಗರಿ ಖರೀದಿಗೆ ಪರವಾನಿಗೆ ನೀಡಬೇಕೆಂದು ಅವರು ಪತ್ರಿಕಾ ಪ್ರಕಟನೆ ಮೂಲಕ ಒತ್ತಾಯ ಮಾಡಿದ್ದಾರೆ.
Next Story





