ಮೋದಿ ವಿಚಾರ್ ಮಂಚ್‌ಗೆ ಫೆ.04 ರಂದು ಚಾಲನೆ
ಬೆಂಗಳೂರು, ಫೆ.3: ಪ್ರಧಾನಿ ನರೇಂದ್ರ ಮೋದಿ ವಿಚಾರ ಧಾರೆಗಳನ್ನು ಜನರಲ್ಲಿಗೆ ಕೊಂಡೊಯ್ಯುವ ಸಲುವಾಗಿ ನರೇಂದ್ರ ಮೋದಿ ವಿಚಾರ್ ಮಂಚ್ ಆರಂಭ ಮಾಡಿದ್ದು, ಫೆ.04 ರಂದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ರವಿ ಚಾಣಕ್ಯ ಚಾಲನೆ ನೀಡಲಿದ್ದಾರೆ ಎಂದು ಮಂಚ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಳ್ಳಕೆರೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ವಿಚಾರಧಾರೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಆರೆಸ್ಸೆಸ್‌ನ ಸಂಚಾಲಕ, ಗುಜರಾತ್‌ನ ರವಿ ಚಾಣಕ್ಯ ಅವರು ಜವಾಬ್ದಾರಿ ಹೊತ್ತಿದ್ದಾರೆ. ರಾಜ್ಯದಲ್ಲಿ ಆ ಉಸ್ತುವಾರಿಯನ್ನು ಬಿಜೆಪಿ ಮುಖಂಡ ಕೆ.ಆರ್.ವೆಂಕಟೇಶ್‌ಗೌಡ ಅವರಿಗೆ ವಹಿಸಲಾಗಿದೆ. ಈಗಾಗಲೇ ಗೌಡರನ್ನು ಆಯ್ಕೆ ಮಾಡಿದ್ದು, ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಭಾನುವಾರ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನರೇಂದ್ರ ಮೋದಿ ವಿಚಾರ್ ಮಂಚ್‌ನ ದಕ್ಷಿಣ ಭಾರತ ರಾಜ್ಯಗಳ ಮುಖ್ಯ ಸಂಯೋಜಕ ದೇಶ್‌ಪಾಲ್ ಸಿಂಗ್ ರಾಥೋರ್, ಸೋಪರ್ಣಿಕಾ ವಿಜೇಂಗ್ರ ಪೂರಿ, ನಟ ಅರುಣ್ ಸಾಗರ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.





