ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಹೈ ಫ್ಲೆಕ್ಸಿಯನ್ ಗೋಲ್ಡ್ ನೀ ಜಾಯಿಂಟ್ ವ್ಯವಸ್ಥೆ ಯಶಸ್ವಿ ಅಳವಡಿಕೆ

ಮಂಗಳೂರು, ಫೆ. 3: ಪ್ರಖ್ಯಾತ ಮೂಳೆ ಶಸ್ತ್ರಚಿಕಿತ್ಸಕ (ಚಿನ್ನದ ಪದಕ ವಿಜೇತ), ಹಾಗೂ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ನಿರ್ದೇಶಕರಾದ ಡಾ. ಜೆ.ವಿ ಶ್ರೀನಿವಾಸ್ ಅವರು ಶನಿವಾರ ಮಂಗಳೂರಿನ ಜಸ್ಟಿಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ರಾಜ್ಯದ ಮೊಟ್ಟಮೊದಲ ಹೈ ಫ್ಲೆಕ್ಸಿಯನ್ ಗೋಲ್ಡ್ ನೀ ಜಾಯಿಂಟ್ ಸಿಸ್ಟಮ್, ಒಪ್ಯುಲೆಂಟ್ ಅನ್ನು ಕೀಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಅಳವಡಿಸಿದರು.
ಈ ಶಸ್ತ್ರಚಿಕಿತ್ಸೆಯನ್ನು ಮಂಗಳೂರಿನ ಫಾದರ್ ಮುಲ್ಲರ್ ಸಂಭಾಗಣಕ್ಕೆ ನೇರ ಪ್ರಸಾರ ಮಾಡಲಾಗಿತ್ತು. ತನ್ನ ಸಾಬೀತಾಗಿರುವ ಸಾಮರ್ಥ್ಯದಿಂದಾಗಿ ಕೊಕೃಮೊವು ಕೀಲು ಬದಲಿ ವಸ್ತುಗಳಲ್ಲಿ ದಶಕಗಳಿಂದಲೂ ಬಳಕೆಯಾಗುತ್ತಿರುವ ವಸ್ತುವಾಗಿದೆ. ಇದಕ್ಕೆ ಟಿನ್ಬಿನ್ ಎಂಬ ಕೋಟಿಂಗ್ ಒದಗಿಸುವ ಅತ್ಯಾಧುನಿಕ ತಾಂತ್ರಿಕ ಪ್ರಕ್ರಿಯೆಯ ಅನ್ವೇಷಣೆಯಿಂದಾಗಿ ಸದ್ಯ ಈ ತಂತ್ರಜ್ಞಾನದ ಸಾಮರ್ಥ್ಯ ಮತ್ತು ಬಾಳಿಕೆ ಎರಡೂ ವೃದ್ಧಿಸಿದೆ. ದುಪ್ಪಟ್ಟಾದ ಸಾಮರ್ಥ್ಯ ಮತ್ತು ಗಡುಸುತನದಿಂದಾಗಿ ಈ ಸಾಧನದ ಸವೆತವು ಇತರ ಸಾಧನಗಳಿಗಿಂತ ಶೇ. 40 ಕಡಿಮೆಯಾಗಿದೆ ಹಾಗೂ ಇದು ಅಲರ್ಜಿ ರಹಿತವಾಗಿರುವುದರಿಂದ ದೇಹವು ಈ ಸಾಧನವನ್ನು ಬಹುಬೇಗನೆ ಒಪ್ಪಿಕೊಳ್ಳುತ್ತದೆ. ಹಾಗಾಗಿ ಇದು ಭಾರತದಲ್ಲಿ ಲಭ್ಯವಿರುವ ಇತರ ಎಲ್ಲಾ ಕೀಳು ಬದಲಿ ಅಳವಡಿಕೆಗಳಿಗಿಂತ ಉತ್ತಮವಾಗಿದೆ. ಒಪ್ಯುಲೆಂಟ್ ಕೀಲು ಬದಲಿ ವ್ಯವಸ್ಥೆಯನ್ನು ಅಳವಡಿಸುವುದರಿಂದ ರೋಗಿಗಳು ಮೆಟ್ಟಿಲು ಹತ್ತಬಹುದು, ಮೊಣಕಾಲ ಮೇಲೆ ಕುಳಿತುಕೊಳ್ಳಬಹುದು ಹಾಗೂ ಇತರ ಎಲ್ಲಾ ಕೆಲಸಗಳನ್ನು ಮಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.





