ವೋಝ್ನಿಯಾಕಿಗೆ ಡರಿಯಾ ಶಾಕ್

ಮಾಸ್ಕೋ, ಫೆ.3: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಹಾಗೂ ವಿಶ್ವದ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಸೈಂಟ್ ಪೀಟರ್ಸ್‌ಬರ್ಗ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಅಂತಿಮ-8ರ ಪಂದ್ಯದಲ್ಲಿ ವೋಝ್ನಿಯಾಕಿ ರಶ್ಯದ ಡರಿಯಾ ಕಸಟ್‌ಕಿನಾ ವಿರುದ್ಧ 7-6(7/2), 6-3 ಸೆಟ್‌ಗಳಿಂದ ಸೋತಿದ್ದಾರೆ. ಫ್ರಾನ್ಸ್‌ನ ನಾಲ್ಕನೇ ಶ್ರೇಯಾಂಕದ, ಹಾಲಿ ಚಾಂಪಿಯನ್ ಕ್ರಿಸ್ಟಿನಾ ಮ್ಲಾಡೆನೊವಿಕ್ ಝೆಕ್‌ನ ಕಟೆರಿನಾ ಸಿನಿಯಾಕೊವಾ ವಿರುದ್ಧ 6-4, 6-3 ನೇರ ಸೆಟ್‌ಗಳಿಂದ ಜಯ ಸಾಧಿಸಿ ಸೆಮಿಫೈನಲ್‌ಗೆ ತಲುಪಿದ್ದಾರೆ.
ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊರನ್ನು 6-0, 6-2 ರಿಂದ ಸೋಲಿಸುವ ಮೂಲಕ ಅಂತಿಮ-4ರ ಹಂತಕ್ಕೇರಿದ್ದಾರೆ.
Next Story





