ಕುಂದಾಪುರ: ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ

ಕುಂದಾಪುರ, ಫೆ.4: ಕುಂದಾಪುರ ಆಟೋರಿಕ್ಷಾ ಚಾಲಕರ ಮತ್ತು ವಾಹನ ಚಾಲಕರ ಸಂಘ(ಸಿಐಟಿಯು) ವತಿಯಿಂದ ಆಟೋರಿಕ್ಷಾ ಮತ್ತು ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಹಂಚು ಕಾರ್ಮಿಕ ಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಸಮುದಾಯ ಸಾಂಸ್ಕ್ರತಿಕ ಸಂಘಟನೆಯ ಜಿ.ವಿ ಕಾರಂತ್ ಮಾತನಾಡಿ, ಚಾಲಕರ ಬೆವರಿನಿಂದ ಅವರ ಮಕ್ಕಳಿಗೆ ಸಂಘವು ನಿರಂತರವಾಗಿ ತ್ಯಾಗ, ಪರಿಶ್ರಮದಿಂದ ವಿದ್ಯಾರ್ಥಿ ವೇತನ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಇದರ ಸದುಪಯೋಗದಿಂದ ಉನ್ನತ ಶಿಕ್ಷಣ ಪಡೆಯಬೇಕು. ಪೋಷಕರ ಸಹಕಾರವು ಮಕ್ಕಳಲ್ಲಿ ಉನ್ನತ ಸಂಸ್ಕಾರ ಸಮಾಜ ದಲಿ್ಲ ಮೂಡುವಂತಾಗಬೇಕು ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಶಿಕ್ಷಣ ವ್ಯಾಪಾರ, ಉದ್ಯೋಗ ನಾಶ, ಆರೋಗ್ಯ ಕ್ಷೇತ್ರ ಮಾರಾಟದ ನೀತಿಗಳಿಂದ ವಿದ್ಯಾರ್ಥಿಗಳ ಭವಿಷ್ಯವೂ ಮಾರಾಟವಾಗುವ ವಾತಾವರಣ ಸೃಷ್ಠಿಯಾಗು ತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಾಲಕರ ನೂರಾರು ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಭುವನ ಸುರೇಶ್ ದೇವಾಡಿಗ, ಪೃಥ್ವಿ ಪ್ರಭಾಕರ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮಣ ಬರೆಕಟ್ಟು ವಹಿಸಿದ್ದರು.
ಸಂಘದ ಸಲಹೆಗಾರರಾದ ಚಂದ್ರ ವಿ., ವಿದ್ಯಾರ್ಥಿ ವೇತನ ಸಮಿತಿ ಸಂಚಾ ಲಕ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೇತನದ ವರದಿಯನ್ನು ಪ್ರಧಾನ ಕಾರ್ಯದರ್ಶಿ ರಮೇಶ್ ವಿ. ಮಂಡಿಸಿದರು. ಮಲ್ಲಿಕಾರ್ಜನ ಅತಿಥಿ ಗಳನ್ನು ಗೌರವಿಸಿದರು. ರವಿ ವಿ.ಎಂ.ಸ್ವಾಗತಿಸಿದರು. ರಾಜೇಶ್ ಪಡುಕೋಣೆ ವಂದಿಸಿದರು. ರಾಜು ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.







