ಮರಾಠಿಮೂಲೆ ಮೊಯ್ದಿನ್ ಕುಂಞಿ ನಿಧನ

ಮಂಗಳೂರು, ಫೆ.4: ಸಮಸ್ತದ ಹಿರಿಯ ಕಾರ್ಯಕರ್ತ ಹಾಗೂ ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಮರಾಠಿಮೂಲೆ ಮೊಯ್ದಿನ್ ಕುಂಞಿ (71) ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಆರು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮದ್ರಸ ಮ್ಯಾನೇಜ್‌ಮೆಂಟ್ ದ.ಕ. ಜಿಲ್ಲಾ ಉಪಾಧ್ಯಕ್ಷರಾಗಿ, ಮಂಗಳಾನಗರ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿ, ಕಿನ್ಯ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾಗಿ, ಮಂಜನಾಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿ, ಮುಸ್ಲಿಂ ವಸತಿ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಮರಾಠಿಮೂಲೆ ಮೊಯ್ದಿನ್ ಕುಂಞಿ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್, ಸ್ವಾದಿಕಲಿ ಶಿಹಾಬ್ ತಂಙಳ್, ಸಮಸ್ತ ಅಧ್ಯಕ್ಷ ಜಿಫ್ರಿ ತಂಙಳ್, ಕಾರ್ಯದರ್ಶಿ ಆಲಿಕುಟ್ಟಿ ಉಸ್ತಾದ್, ಎಂ.ಟಿ.ಉಸ್ತಾದ್, ಖಾಸಿಂ ಉಸ್ತಾದ್, ಮಿತ್ತಬೈಲ್ ಜಬ್ಬಾರ್ ಉಸ್ತಾದ್, ಯು.ಎಂ. ಉಸ್ತಾದ್, ತ್ವಾಖಾ ಉಸ್ತಾದ್, ಝೈನುಲ್ ಆಬಿದೀನ್ ತಂಙಳ್, ಕೆ.ಎಸ್.ಹೈದರ್ ದಾರಿಮಿ, ಹಾಜಿ ಇಬ್ರಾಹೀಂ ಕೋಡಿಜಾಲ್, ಇಸ್ಮಾಯೀಲ್ ಫೈಝಿ, ಕೆ.ಎಲ್. ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಸಿದ್ದೀಕ್ ಫೈಝಿ ಕರಾಯ, ಮುಸ್ತಫಾ ಫೈಝಿ, ಸಿತಾರ್ ಮಜೀದ್ ಹಾಜಿ, ನೌಶಾದ್ ಹಾಜಿ, ಇಬ್ರಾಹೀಂ ಕೊಂಬುಕುದಿ, ರಫೀಕ್ ಅಜ್ಜಾವರ, ಐ. ಮೊಯ್ದಿನಬ್ಬ ಹಾಜಿ, ರವೂಫ್ ಸುಲ್ತಾನ್ ಗೋಲ್ಡ್, ಸುಲೈಮಾನ್ ಕಲ್ಲಡ್ಕ, ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಜಿ.ಎಂ. ಫೈಝಿ ಚೇಳಾರಿ, ಬಂಬ್ರಾಣ ಉಸ್ತಾದ್, ಎ.ಪಿ. ಸಅದಿ, ಪೇರಾಳ್ ಉಸ್ತಾದ್, ಬಶೀರ್ ಅಝ್‌ಹರಿ ಬಾಯಾರ್, ರಶೀದ ಹಾಜಿ ಪುತ್ತೂರು, ಹಕೀಂ ಪರ್ತಿಪ್ಪಾಡಿ, ಅಬೂಬಕರ್ ಹಾಜಿ ಗೋಳ್ತಮಜಲು, ರಿಯಾಝ್ ಹಾಜಿ ಬಂದರ್, ಇಬ್ರಾಹೀಂ ಕೊಣಾಜೆ, ಅಶ್ರಫ್ ಭಟ್ಕಳ್, ಅಬೂಬಕರ್ ಮಂಗಳಾನಗರ, ಕೆ.ಬಿ. ಇಸ್ಮಾಯೀಲ್ ಹಾಜಿ, ಕೆ.ಎಸ್. ಶೇಖಬ್ಬ ಹಾಜಿ, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಹಾಜಿ ಎಂ.ಎ. ಅಬ್ದುಲ್ಲಾ ಬೆಳ್ಮ, ಅಶ್ರಫ್ ಬೆಳ್ಮ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಶರೀಫ್ ಫೈಝಿ ಕಡಬ, ಹನೀಫ್ ನಿಝಾಮಿ ಉರುಮನೆ, ಅಲಿ ದಾರಿಮಿ ಕಿನ್ಯ ಹಾಗೂ ಸುನ್ನಿ ಸಂದೇಶ ಪತ್ರಿಕಾ ಬಳಗ ಹಾಗೂ ಕಿಸಾ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.







