Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮಗೆ ಗೊತ್ತೇ.....ಇವು ವಿಮಾನದೊಳಗಿನ...

ನಿಮಗೆ ಗೊತ್ತೇ.....ಇವು ವಿಮಾನದೊಳಗಿನ ಅತ್ಯಂತ ಕೊಳಕು ಸ್ಥಳಗಳು!

ವಾರ್ತಾಭಾರತಿವಾರ್ತಾಭಾರತಿ4 Feb 2018 6:08 PM IST
share
ನಿಮಗೆ ಗೊತ್ತೇ.....ಇವು ವಿಮಾನದೊಳಗಿನ ಅತ್ಯಂತ ಕೊಳಕು ಸ್ಥಳಗಳು!

ಭಾರತೀಯ ರೈಲುಗಳ ಪ್ರಕರಣದಲ್ಲಿ ಮಾತ್ರ ಸ್ವಚ್ಛತೆಯು ಅತ್ಯಂತ ಗಂಭೀರ ಕಳವಳದ ವಿಷಯವಾಗಿದೆ ಎಂದು ಭಾವಿಸಿದ್ದರೆ ನೀವು ಖಂಡಿತ ಎಡವಿದ್ದೀರಿ ಎಂದೇ ಅರ್ಥ. ನಮ್ಮ ವಿಮಾನಗಳೂ ಅತ್ಯಂತ ಕೊಳಕಾಗಿರಬಲ್ಲವು! ಪ್ರತಿನಿತ್ಯ ಲಕ್ಷಗಟ್ಟಲೆ ಜನರು ಇತರ ಸಾರಿಗೆ ವಿಧಾನಗಳ ಜೊತೆಗೆ ವಿಮಾನ ಮತ್ತು ರೈಲುಗಳಲ್ಲಿಯೂ ಪ್ರಯಾಣಿಸುತ್ತಾರೆ. ಇವು ಹಲವಾರು ಸೂಕ್ಷ್ಮಜೀವಿಗಳಿಗೆ ಆಶ್ರಯತಾಣಗಳಾಗಿದ್ದು, ನಮ್ಮನ್ನು ರೋಗಗಳಿಗೆ ಗುರಿಯಾಗಿಸಬಲ್ಲವು.

 ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಲ್ಲಿನ ಕೊಳಕು ಸ್ಥಳಗಳ ಸ್ಥಾನಗಳನ್ನು ನಿರ್ಧರಿಸಲು ಅಮೆರಿಕದ ಟ್ರಾವೆಲ್ ಮ್ಯಾತ್ ಸಂಸ್ಥೆಯು 2015ರಲ್ಲಿ ನಡೆಸಿದ್ದ ಅಧ್ಯಯನವು ಅವು ಸಾಮಾನ್ಯ ಮನೆಯೊಂದಕ್ಕಿಂತ ಹೆಚ್ಚು ಕೊಳಕಾಗಿರಬಹುದು ಎನ್ನವುದನ್ನು ತೋರಿಸಿದೆ.

ನಿಮಗೆ ಅರಿವಿಲ್ಲದಿರಬಹುದು,ವಿಮಾನದಲ್ಲಿಯ ಈ ಐದು ಸ್ಥಳಗಳು ಅತ್ಯಂತ ಕೊಳಕಗಾಗಿರುತ್ತವೆ.

►ಸೀಟ್‌ಬೆಲ್ಟ್ ಬಕಲ್‌ಗಳು

ವಿಮಾನದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿರುವ ಸೀಟ್ ಬೆಲ್ಟ್‌ಗಳ ಬಕಲ್‌ಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳ ಆವಾಸ ಸ್ಥಾನಗಳಾಗಿವೆ. ಪ್ರತಿಯೊಬ್ಬ ಪ್ರಯಾಣಿಕನೂ ತನ್ನ ಪ್ರಯಾಣದ ಅವಧಿಯಲ್ಲಿ ಕನಿಷ್ಠ ಎರಡು ಬಾರಿ ಇವುಗಳನ್ನು ಸ್ಪರ್ಶಿಸುತ್ತಾನೆ. ಈ ಬಕಲ್‌ಗಳನ್ನು ಸಾಮಾನ್ಯವಾಗಿ ಸ್ವಚ್ಛಗೊಳಿಸಲಾಗುವುದಿಲ್ಲ. ಹೀಗಾಗಿ ಪ್ರಯಾಣಿಕರ ಕೈಗಳಲ್ಲಿರುವ ಬ್ಯಾಕ್ಟೀರಿಯಾಗಳು ಇವುಗಳಿಗೆ ವರ್ಗಾವಣೆಗೊಳ್ಳುತ್ತಿರುತ್ತವೆ. ಜೊತೆಯಲ್ಲಿ ಸ್ಯಾನಿಟೈಸರ್ ಬಾಟ್ಲಿಯೊಂದನ್ನು ಇಟ್ಟುಕೊಂಡು ಆಗಾಗ್ಗೆ ಅದನ್ನು ಬಳಸುತ್ತಿರುವುದು ಈ ಸಮಸ್ಯೆಯನ್ನು ನಿಭಾಯಿಸಲು ಅತ್ಯಂತ ಸುಲಭವಾದ ಮಾರ್ಗ ವಾಗಿದೆ.

►ಟಾಯ್ಲೆಟ್‌ಗಳು

  ವಿಮಾನದಲ್ಲಿಯ ಟಾಯ್ಲೆಟ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತದೆ ಯಾದರೂ ಅವು ಪ್ರಯಾಣಿಕರಿಗೆ ಸೋಂಕನ್ನು ಉಂಟುಮಾಡುವ ಅಪಾಯವು ಇದ್ದೇ ಇರುತ್ತದೆ. ಕೆಲವು ಸಿಂಕ್‌ಗಳು, ಫ್ಲಷ್ ಹ್ಯಾಂಡಲ್‌ಗಳು ಮತ್ತು ಟಾಯ್ಲೆಟ್ ಸೀಟ್‌ಗಳ ಮೇಲೆ ಅಪಾಯಕಾರಿಯಾದ ಇ.ಕೋಲಿ ಬ್ಯಾಕ್ಟೀರಿಯಾಗಳು ಮನೆಮಾಡಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

►ಟ್ರೇ ಟೇಬಲ್‌ಗಳು

ಟ್ರೇ ಟೇಬಲ್‌ಗಳು ವಿಮಾನದಲ್ಲಿಯ ಅತ್ಯಂತ ಕೊಳಕು ಸ್ಥಳಗಳಾಗಿವೆ. ಅಧ್ಯಯನಕ್ಕೊಳಪಡಿಸಲಾದ ಟ್ರೇ ಟೇಬಲ್‌ಗಳ ಸ್ಯಾಂಪಲ್‌ಗಳಲ್ಲಿ ಟಾಯ್ಲೆಟ್‌ನ ಫ್ಲಷ್ ಬಟನ್‌ಗಳಿಗೆ ಹೋಲಿಸಿದರೆ ಪ್ರತಿ ಚದುರ ಇಂಚಿಗೆ ಎಂಟು ಪಟ್ಟುಗಳಷ್ಟು ಅಧಿಕ ಬ್ಯಾಕ್ಟೀರಿಯಾಗಳಿರುವುದು ಕಂಡುಬಂದಿದೆ. ಟ್ರೇ ಟೇಬಲ್‌ಗಳು ಶೀತ ವೈರಸ್‌ಗಳು, ಹ್ಯೂಮನ್ ಪ್ಯಾರಾ-ಇನ್‌ಫ್ಲುಯೆಂಝಾ ವೈರಸ್‌ಗಳು ಮತ್ತು ನೋರುವೈರಸ್‌ಗಳನ್ನು ಹೊಂದಿರುತ್ತವೆ. ಇಂತಹ ಟೇಬಲ್‌ಗಳನ್ನು ಆಹಾರ ಸೇವನೆಗೆ ಬಳಸದಿರುವುದು ಕಾಯಿಲೆಗಳಿಂದ ದೂರವುಳಿಯುವ ಏಕೈಕ ಮಾರ್ಗವಾಗಿದೆ. ಇಲ್ಲದಿದ್ದರೆ ಟ್ರೇ ಟೇಬಲ್ ಬಳಸುವ ಮುನ್ನ ಸ್ಯಾನಿಟೈಸರ್‌ನಿಂದ ಅದನ್ನು ಚೆನ್ನಾಗಿ ಒರೆಸಿಕೊಳ್ಳಿ.

►ಮಧ್ಯದ ಪ್ಯಾಸೇಜ್ ಪಕ್ಕದ ಆಸನಗಳು

 ಹೆಚ್ಚಿನ ವಿಮಾನ ಪ್ರಯಾಣಿಕರು ಮಧ್ಯದ ಪ್ಯಾಸೇಜ್‌ಗಳ ಪಕ್ಕದ ಆಸನಗಳನ್ನು ಇಷ್ಟ ಪಡಬಹುದು. ಇವು ಹೆಚ್ಚು ಆರಾಮದಾಯಕವಾಗಿರುತ್ತವೆ ನಿಜ, ಆದರೆ ಸೋಂಕು ಅಂಟುವ ಅಪಾಯವನ್ನೂ ಹೊಂದಿರುತ್ತವೆ. ಪ್ಯಾಸೇಜ್ ಮೂಲಕ ಓಡಾಡುವ ಪ್ರತಿಯೊಬ್ಬ ವ್ಯಕ್ತಿಯೂ ಆಧಾರಕ್ಕಾಗಿ ಪಕ್ಕದ ಆಸನಗಳ ಮೇಲ್ಭಾಗವನ್ನು ಹಿಡಿದುಕೊಳ್ಳುವುದರಿಂದ ಅಲ್ಲಿ ಹಾನಿಕಾರಕ ಸೂಕ್ಷ್ಮಾಣುಜೀವಿಗಳು ಸಂಗ್ರಹಗೊಳ್ಳುತ್ತಲೇ ಇರುತ್ತವೆ.

►ಸೀಟ್‌ಬ್ಯಾಕ್ ಪಾಕೆಟ್‌ಗಳು

ಪ್ರತಿಯೊಂದು ಆಸನದ ಹಿಂಭಾಗದಲ್ಲಿಯೂ ಪುಟ್ಟ ಬಾಸ್ಕೆಟ್‌ಗಳಿದ್ದು, ಇವುಗಳಲ್ಲಿ ಪ್ರಯಾಣಿಕರು ತ್ಯಾಜ್ಯವಸ್ತುಗಳನ್ನು ಹಾಕುತ್ತಿರುತ್ತಾರೆ. ಕೆಲವೊಮ್ಮೆ ವಿಮಾನದ ಸಿಬ್ಬಂದಿಗಳಿಗೆ ಪ್ರತಿಯೊಂದೂ ಬಾಸ್ಕೆಟ್‌ನ್ನು ಸ್ವಚ್ಛಗೊಳಿಸಲು ಸಮಯಾವಕಾಶವಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅವುಗಳಲ್ಲಿರುವ ಸೂಕ್ಷ್ಮಜೀವಿಗಳಿಂದ ಪಾರಾಗಲು ಅವುಗಳನ್ನು ಬಳಸದಿರುವುದೇ ಲೇಸು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X