ಕಟಪಾಡಿ ಬೀಡು ಮೂಡು-ಪಡು ಜೋಡುಕೆರೆ ಕಂಬಳ

ಉಡುಪಿ, ಫೆ.4: ಇತಿಹಾಸ ಪ್ರಸಿದ್ದ ಕಟಪಾಡಿ ಬೀಡು ಮೂಡು-ಪಡು ಜೋಡುಕೆರೆ ಕಂಬಳಕ್ಕೆ ಕಟಪಾಡಿ ಬೀಡು ಮನೆತನದ ಹಿರಿಯರಾದ ಮಹಾ ಬಲ ಬಲ್ಲಾಳ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಅಂಬಾಡಿಬೀಡು ಡಾ.ಎ.ರವೀಂದ್ರನಾಥ್ ಶೆಟ್ಟಿ, ಕಂಬಳ ಸಮಿತಿಯ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ವಿನಯ ಬಲ್ಲಾಳ್, ನವೀನ್ ಬಲ್ಲಾಳ್, ಮೂಡುಬೆಟ್ಟು ಗುತ್ತು ಆನಂದ ಶೆಟ್ಟಿ, ವಸಂತ ಶೆಟ್ಟಿ, ಅಶೋಕ್ ಶೆಟ್ಟಿ, ಶಿವಣ್ಣ ಶೆಟ್ಟಿ ಇರ್ವತ್ತೂರು, ಭಾಸ್ಕರ ಕೋಟ್ಯಾನ್, ಸಂಪತ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.
ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಬಯಲು ಕಂಬಳ ಕೂಟದ ಆರು ವಿಭಾಗಗಳಲ್ಲಿ ಒಟ್ಟು 105 ಜೊತೆ ಕೋಣಗಳು ಭಾಗವಹಿಸಿದ್ದವು. ಸ್ಪರ್ಧೆಯ ಫಲಿತಾಂಶದ ವಿವರ ಈ ಕೆಳಗಿನಂತೆ ಇದೆ.
ಕನೆಹಲಗೆ(6.5 ಕೋಲು ನಿಶಾನೆಗೆ ನೀರು ಹಾಯಿಸಿದವರು): ವಾಮಂಜೂರು ಅಭಯ ನವೀನ್‌ಚಂದ್ರ ಆಳ್ವ(ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ) ಮತ್ತು ಬಾರ್ಕೂರು ಶಾಂತರಾಮ ಶೆಟ್ಟಿ (ಹಲಗೆ ಮೆಟ್ಟಿದವರು: ಮಂದಾರ್ತಿ ಗೋಪಾಲ ನಾಯ್ಕ್).
ಹಗ್ಗ ಹಿರಿಯ: ಪ್ರ- ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ(ಓಡಿಸಿದವರು: ಮಿಜಾರು ಶ್ರೀನಿವಾಸ ಗೌಡ), ದ್ವಿ- ಮೂಡಬಿದಿರೆ ಕರಿಂಜೆ ವಿಶ್ವನಾಥ ಶೆಟ್ಟಿ (ಓಡಿಸಿದವರು: ಪಣಪೀಲು ಪ್ರವೀಣ್ ಕೋಟ್ಯಾನ್).
ಹಗ್ಗ ಕಿರಿಯ: ಪ್ರ- ನಿಟ್ಟೆ ಸುರೇಶ್ ಕೋಟ್ಯಾನ್ (ಓಡಿಸಿದವರು: ಮಿಜಾರು ಶ್ರೀನಿವಾಸ ಗೌಡ), ದ್ವಿ-ಡಾ.ಚಿಂತನ್ ರೋಹಿತ್ ಹೆಗ್ಡೆ(ಓಡಿಸಿದರು: ಕಡಂದಲೆ ದುರ್ಗಾಪ್ರಸಾದ್).
ನೇಗಿಲು ಹಿರಿಯ: ಪ್ರ-ಬೋಳದಗುತ್ತು ಸತೀಶ್ ಶೆಟ್ಟಿ ‘ಎ’(ಓಡಿಸಿದವರು: ಸುರೇಶ್ ಎಂ.ಶೆಟ್ಟಿ), ದ್ವಿ- ಬೋಳದಗುತ್ತು ಸತೀಶ್ ಶೆಟ್ಟಿ ‘ಬಿ’ (ಓಡಿಸಿದವರು: ಸುರೇಶ್ ಎಂ.ಶೆಟ್ಟಿ).
ನೇಗಿಲು ಕಿರಿಯ: ಪ್ರ-ನಿಟ್ಟೆ ಶರತ್ ಸಂದೇಶ್ ಶೆಟ್ಟಿ (ಓಡಿಸಿದವರು:ಕಡಂದಲೆ ಭವನೀಷ್), ದ್ವಿ-ಮುಲ್ಲಡ್ಕ ರವೀಂದ್ರ ಶೆಟ್ಟಿ ‘ಬಿ’ (ಓಡಿಸಿದವರು: ಕಡಂದಲೆ ದುರ್ಗಾಪ್ರಸಾದ್).
ಅಡ್ಡ ಹಲಗೆ: ಪ್ರ- ಪಾತಿಲ ರವಿರಾಜ್ ಶೆಟ್ಟಿ ’ಬಿ’ (ಹಲಗೆ ಮೆಟ್ಟಿದವರು: ನಾರಾವಿ ಯುವರಾಜ ಜೈನ್), ದ್ವಿ-ಬೋಳಾರ ತ್ರಿಶಾಲ್ ಪೂಜಾರಿ(ಹಲಗೆ ಮೆಟ್ಟಿದವರು: ಬಂಗಾಡಿ ಲೋಕಯ್ಯ ಗೌಡ).







