ವಿಟ್ಲ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: ನಾಲ್ವರ ಬಂಧನ
ಬಂಟ್ವಾಳ, ಫೆ. 4: ಜುಗಾರಿ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ಬೈಕ್, ನಗದು ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಆನೆಕಲ್ಲು ಎಂಬಲ್ಲಿ ರವಿವಾರ ನಡೆದಿದೆ.
ಮಂಜೇಶ್ವರ ವರ್ಕಾಡಿ ನಿವಾಸಿ ಜಿತೇಂದ್ರ, ಸಾಲೆತ್ತೂರು ಕಟ್ಟತ್ತಿಲ ನಿವಾಸಿ ಆರೀಸ್, ದೇರಳಕಟ್ಟೆ ನಿವಾಸಿ ಅಬ್ಬಾಸ್, ಸುಂಕದಕಟ್ಟೆ ನಿವಾಸಿ ವಿಶ್ವನಾಥ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಆರೋಪಿಗಳಿಂದ ನಾಲ್ಕು ದ್ವಿಚಕ್ರ ವಾಹನ, 6,250 ರೂ. ವಶಪಡಿಸಿಕೊಂಡಿದ್ದಾರೆ. ಬಂಧಿತರು ಆನೆಕಲ್ಲು ನದಿಯ ತಟದಲ್ಲಿ ಜೂಜಾಟದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಟ್ಲ ಎಸ್ಸೈ ನಾಗರಾಜ್ ಹಾಗೂ ತಂಡ ಈ ದಾಳಿ ನಡೆಸಿದೆ. ಜೂಜಾಟದಲ್ಲಿ ಸುಮಾರು 12 ಮಂದಿಗಳಿದ್ದು, ದಾಳಿಯ ವೇಳೆಗೆ ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
Next Story





